ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ: ಕನಿಷ್ಠ ತಾಪಮಾನದಲ್ಲಿ ಕೊಂಚ ಏರಿಕೆ

Last Updated 27 ಡಿಸೆಂಬರ್ 2020, 6:53 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯಲ್ಲಿ ಕನಿಷ್ಠ ತಾಪಮಾನವು ಭಾನುವಾರ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ.

ನಗರದಲ್ಲಿ ಶನಿವಾರ ಕನಿಷ್ಠ ತಾಪಮಾನವು 4.6 ಡಿಗ್ರಿ ಸೆಲ್ಸಿಯಸ್‌ ವರದಿಯಾಗಿತ್ತು. ಆದರೆ ಭಾನುವಾರ ಕನಿಷ್ಠ ತಾಪಮಾವು 6 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು ಎಂದು ಸಫ್ದರ್ಜಂಗ್ ವೀಕ್ಷಣಾಲಯವು ಮಾಹಿತಿ ನೀಡಿದೆ.

ತಾಪಮಾನದಲ್ಲಾಗಿರುವ ಏರಿಕೆಯು ಸ್ವಲ್ಪ ಸಮಯದ ತನಕ ಮಾತ್ರ ಇರಲಿದೆ ಎಂದು ಸ್ಥಳೀಯ ಐಎಂಡಿ ಕೇಂದ್ರದ ಮುಖ್ಯಸ್ಥ ಕುಲ್‌ದೀಪ್‌ ಶ್ರೀವಾಸ್ತವ್‌ ಅವರು ಹೇಳಿದರು.

ಡಿಸೆಂಬರ್‌ 28 ರಿಂದ 29 ತನಕ ಪಂಜಾಬ್‌, ಹರಿಯಾಣ, ದೆಹಲಿ, ಯುಪಿ ಮತ್ತು ಉತ್ತರ ರಾಜಸ್ಥಾನದಲ್ಲಿ ಶೀತ ಅಲೆಯ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಅಲ್ಲದೆ ಮಂಜು ಕವಿದ ವಾತವಾರಣವೂ ಇರಲಿದೆ ಎಂದು ಐಎಂಡಿ ಮುನ್ನೆಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT