ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆಯಲ್ಲಿ ’ಸಾಮಾಜಿಕ ಅಂತರ’–’ಭೌತಿಕ ಅಂತರ’ ಚರ್ಚೆ

’ಸುರಕ್ಷಾ ಪದ’ ಬಳಕೆಗೆ ಸಭಾಧ್ಯಕ್ಷ ವೆಂಕಯ್ಯನಾಯ್ಡು ಸಲಹೆ 
Last Updated 15 ಸೆಪ್ಟೆಂಬರ್ 2020, 8:19 IST
ಅಕ್ಷರ ಗಾತ್ರ

ನವದೆಹಲಿ: ರಾಜ್ಯಸಭೆಯಲ್ಲಿ ಮಂಗಳವಾರ ಕೋವಿಡ್‌ 19 ಸುರಕ್ಷತಾ ಕ್ರಮಗಳ ಭಾಗವಾಗಿ ಬಳಸಲಾಗುವ’ಸಾಮಾಜಿಕ ಅಂತರ’ ಪದ ಕುರಿತು ಗಂಭೀರ ಹಾಗೂ ಅರ್ಥಪೂರ್ಣ ಚರ್ಚೆ ನಡೆಯಿತು.

ಈ ಪದ ಬಳಕೆ ಕುರಿತು ಪ್ರಸ್ತಾಪಿಸಿದ ತೃಣಮೂಲ ಕಾಂಗ್ರೆಸ್‌ ಪಕ್ಷದ ಸದಸ್ಯ ಶಾಂತನು ಸೇನ್, ’ಕೊರೊನಾ ಸೋಂಕು ಹರಡದಂತೆ ತಡೆಯಲು, ವ್ಯಕ್ತಿಗಳ ನಡುವೆ ಆರು ಅಡಿ ಅಂತರ ಕಾಯ್ದುಕೊಳ್ಳಬೇಕು ಎಂಬ ನಿಯಮವಿದೆ. ಇದು ಭೌತಿಕ ಅಂತರ. ಪ್ರಸ್ತುತ ಅದಕ್ಕೆ ವಿರುದ್ಧ ಅರ್ಥ ನೀಡುವ ’ಸಾಮಾಜಿಕ ಅಂತರ’ ಎಂಬ ಪದ ಬಳಸಲಾಗುತ್ತಿದೆ. ಇದು ಕೊರೊನಾ ಸೋಂಕಿತರನ್ನು ಸಮಾಜದಲ್ಲಿ ಕೀಳಾಗಿ ಕಾಣುವಂತೆ ಉತ್ತೇಜಿಸುತ್ತದೆ. ಆದ್ದರಿಂದ ಈ ಪದಕ್ಕೆ ಬದಲಾಗಿ ’ಭೌತಿಕ ಅಂತರ’ ಎಂದು ಬಳಸಬೇಕೆಂದು ಒತ್ತಾಯಿಸಿದರು.

ಈ ’ಸಾಮಾಜಿಕ ಅಂತರ’ ಪದದಿಂದಾಗಿ ಅನೇಕ ಕೋವಿಡ್‌ ಸೋಂಕಿತರು ಸಾಕಷ್ಟು ಕಿರುಕುಳ ಅನುಭವಿಸಿರುವ ಉದಾಹರಣೆಗಳಿವೆ. ಆದ್ದರಿಂದ ಇನ್ನು ಮುಂದೆ ಎಲ್ಲೂ ಈ ಸಾಮಾಜಿಕ ಅಂತರ ಎನ್ನುವ ಪದವನ್ನು ಬಳಕೆ ಮಾಡಬಾರದು ಒತ್ತಾಯಿಸಿದರು. ಶಂತನು ಸೇನ್ ಅವರ ಮಾತಿಗೆ ವಿವಿಧ ಪಕ್ಷಗಳ ರಾಜ್ಯಸಭಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು.

ಚರ್ಚೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಸ್ವೀಕರಿಸಿದ ಸಭಾಧ್ಯಕ್ಷ ವೆಂಕಯ್ಯನಾಯ್ಡು,’ಸಾಮಾಜಿಕ ಅಂತರ’ಕ್ಕೆ ಬದಲಾಗಿ ಇನ್ನಷ್ಟು ನಿಖರವಾದ ಪದವನ್ನು ಬಳಸಬೇಕು ಎಂದು ಹೇಳುವ ಜತೆಗೆ ’ಸುರಕ್ಷಾ ಅಂತರ’ ಎಂಬ ಪದ ಬಳಕೆಗೆ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT