ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಪತಿ ವೆಂಕಟೇಶ್ವರ ದೇಗುಲಕ್ಕೆ ₹ 9.2 ಕೋಟಿ ಆಸ್ತಿ ದಾನ ಮಾಡಿದ ಮಹಿಳೆ

Last Updated 17 ಫೆಬ್ರುವರಿ 2022, 11:45 IST
ಅಕ್ಷರ ಗಾತ್ರ

ತಿರುಪತಿ (ಪಿಟಿಐ): ಮಹಿಳೆಯೊಬ್ಬರು ತಿರುಪತಿ ವೆಂಕಟೇಶ್ವರ ದೇವಸ್ಥಾನಕ್ಕೆ ₹9.2 ಕೋಟಿ ಮೌಲ್ಯದ ಆಸ್ತಿ ಮತ್ತು ನಗದು ದಾನ ಮಾಡಿದ್ದಾರೆ.

ಚೆನ್ನೈನ 76 ವರ್ಷದ ಮಹಿಳೆಯೊಬ್ಬರು ಇತ್ತೀಚೆಗೆ ನಿಧನರಾದ ತಮ್ಮಸಹೋದರಿ, ಅವಿವಾಹಿತೆ ಪಾರ್ವತಮ್ಮ ಅವರ ಪರವಾಗಿ, ಗುರುವಾರ ಬೆಳಿಗ್ಗೆ ಬೆಟ್ಟದ ದೇವಸ್ಥಾನದಲ್ಲಿ ಟಿಟಿಡಿ ಮಂಡಳಿಯ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರಿಗೆ ₹3.2 ಕೋಟಿಯ ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ₹6 ಕೋಟಿ ಮೌಲ್ಯದ ಸ್ಥಿರಾಸ್ತಿಯ ದಾಖಲೆಗಳನ್ನು ಹಸ್ತಾಂತರಿಸಿದರು.

ದೇಗುಲದ ಆಡಳಿತ ನಡೆಸುವ ಟಿಟಿಡಿ ನಿರ್ಮಿಸುತ್ತಿರುವ ಮಕ್ಕಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ₹3.2 ಕೋಟಿ ನಗದು ಬಳಸಿಕೊಳ್ಳುವಂತೆ ಮಹಿಳೆ ಟಿಟಿಡಿಗೆ ಮನವಿ ಮಾಡಿದ್ದಾರೆ ಎಂದು ದೇವಸ್ಥಾನದ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT