ಶುಕ್ರವಾರ, ಆಗಸ್ಟ್ 19, 2022
27 °C
ಚಂಡೀಗಡದಿಂದ ಮುಂಬೈಗೆ ವಿಮಾಣದಲ್ಲಿ ಪ್ರಯಾಣಿಸಿದ ನಟಿ

ಕಂಗನಾ ಇದ್ದ ವಿಮಾನದಲ್ಲಿ ಅಂತರ ಉಲ್ಲಂಘನೆ: 'ಇಂಡಿಗೋ'ದಿಂದ ವರದಿ ಕೇಳಿದ ಡಿಜಿಸಿಎ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಚಂಡೀಗಡದಿಂದ ಮುಂಬೈಗೆ ನಟಿ ಕಂಗನಾ ರನೌತ್ ಪ್ರಯಾಣದ ವೇಳೆ ಮಾಧ್ಯಮಗಳು ನಿಯಮದ ಪ್ರಕಾರ ಸುರಕ್ಷಿತ ಅಂತರ ಕಾಯ್ದುಕೊಳ್ಳದಿರುವ ಆರೋಪ ಕುರಿತು ವರದಿ ನೀಡಬೇಕೆಂದು ಇಂಡಿಗೊ ಏರ್‌ಲೈನ್ಸ್‌ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೂಚಿಸಿದೆ.

‘ಬುಧವಾರ ಕಂಗನಾ ಪ್ರಯಾಣಿಸಿದ್ದ 6E254 ವಿಮಾನದಲ್ಲಿ ಮಾಧ್ಯಮ ಪ್ರತಿನಿಧಿಗಳು ತುಂಬಾ ಹತ್ತಿರ ನಿಂತಿರುವ ಕೆಲ ವಿಡಿಯೊಗಳನ್ನು ನಾವು ನೋಡಿದ್ದೇವೆ. ಅಂತರ ಮತ್ತು ಸುರಕ್ಷತೆಯ ನಿಯಮವನ್ನು ಸ್ಪಷ್ಟವಾಗಿರುವ ಉಲ್ಲಂಘನೆಯಾಗಿರುವುದು ಇದರಿಂದ ತಿಳಿಯುತ್ತದೆ. ಈ ಬಗ್ಗೆ ಇಂಡಿಗೊ ಏರ್‌ಲೈನ್ಸ್ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದ್ದೇವೆ’ ಎಂದು ಡಿಜಿಸಿಎ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

‘ಈ ಬಗ್ಗೆ ಈಗಾಗಲೇ ನಾವು ಡಿಜಿಸಿಎಗೆ ನಮ್ಮ ಹೇಳಿಕೆಯನ್ನು ನೀಡಿದ್ದೇವೆ’ ಎಂದು ಇಂಡಿಗೊ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು