ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖರ್ಜಿ ಸಹಿಯಿಂದ ಧಾರವಾಡಕ್ಕೆ ಐಐಟಿ ಸಿಕ್ಕಿತ್ತು

Last Updated 1 ಸೆಪ್ಟೆಂಬರ್ 2020, 0:53 IST
ಅಕ್ಷರ ಗಾತ್ರ

ಧಾರವಾಡ: ರಾಜ್ಯದ ಮೊದಲ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಎಲ್ಲಿ ಸ್ಥಾಪನೆಯಾಗಬೇಕು ಎಂಬ ದೊಡ್ಡ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲೇ, ತಾಂತ್ರಿಕ ಶಿಕ್ಷಣ ಸಂಸ್ಥೆಗಳ ತಿದ್ದುಪಡಿ ಕಾಯ್ದೆಗೆ ಸಹಿ ಹಾಕುವ ಮೂಲಕ ಧಾರವಾಡದಲ್ಲೂ ಐಐಟಿ ಸ್ಥಾಪನೆಗೊಂಡಿತು. ಆ ಮೂಲಕ ಜಿಲ್ಲೆಯ ಹೆಸರು ರಾಷ್ಟ್ರಮಟ್ಟದ ಶೈಕ್ಷಣಿಕ ನಕ್ಷೆಯಲ್ಲಿ ಸ್ಥಾನ ಕಲ್ಪಿಸವಲ್ಲಿ ಮುಖ್ಯಪಾತ್ರ ವಹಿಸಿದವರು ಅಂದಿನ ರಾಷ್ಟ್ರಪತಿ ಪ್ರಣವ ಮುಖರ್ಜಿ.

ದೇಶದ 13ನೇ ರಾಷ್ಟ್ರಪತಿಯಾಗಿದ್ದ ಪ್ರಣವ ಮುಖರ್ಜಿ ಅವರು ಜಿಲ್ಲೆಗೆ ನೇರವಾಗಿ ಭೇಟಿ ನೀಡಿರದಿದ್ದರೂ, ಅವರ ಕೊಡುಗೆಯನ್ನು ಶಿಕ್ಷಣ ಕಾಶಿ ಹೆಸರು ದೇಶ ವಿದೇಶಗಳಲ್ಲಿ ಜನಪ್ರಿಯಗೊಳ್ಳುವಂತೆ ಮಾಡಿದರು.

ಐಐಟಿ ಸ್ಥಾಪನೆ ಕುರಿತ ಚರ್ಚೆ 2015ರಿಂದಲೇ ಆರಂಭಗೊಂಡಿತ್ತು. ದೇಶದ ಆರು ಕಡೆ ಐಐಟಿ ಸ್ಥಾಪಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಇಂಗಿತ ವ್ಯಕ್ತಪಡಿಸಿದ್ದವು.ದೇಶದಲ್ಲಿ ಹೊಸದಾಗಿ ಐಐಟಿ ಸ್ಥಾಪನೆಗೆ ತಂತ್ರಜ್ಞಾನ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಬೇಕಾದ್ದು ಅನಿವಾರ್ಯವಾಗಿತ್ತು.

ಈ ಕಾಯ್ದೆಗೆ ತಿದ್ದುಪಡಿ ತಂದ ಪರಿಣಾಮ ಕರ್ನಾಟಕದ ಧಾರವಾಡ, ಕೇರಳದ ಪಾಲಕ್ಕಾಡ್, ಗೋವಾ, ಛತ್ತೀಸಘಡದ ಭಿಲಾಯಿ, ಜಮ್ಮು ಹಾಗೂ ಆಂಧ್ರಪ್ರದೇಶದ ತಿರುಪತಿಯಲ್ಲಿ ಸೇರಿದಂತೆ ಆರು ಕಡೆ ಐಐಟಿ ಸ್ಥಾಪಿಸುವ ಪ್ರಸ್ತಾವನೆಯನ್ನು ಈ ಕಾಯ್ದೆಯಲ್ಲಿ ಸೇರಿಸಲಾಗಿತ್ತು.

ಕರ್ನಾಟಕದ ಮೊದಲ ಐಐಟಿ ಎಲ್ಲಿ ಸ್ಥಾಪನೆಯಾಗಬೇಕು ಎಂಬ ಚರ್ಚೆ ನಡೆದಾಗ ಧಾರವಾಡದ ಜತೆ ರಾಯಚೂರು ಹಾಗೂ ಮೈಸೂರಿನ ಹೆಸರುಗಳೂ ಕೇಳಿಬಂದಿದ್ದವು. ಹೀಗಾಗಿ ಶಿಕ್ಷಣ ಕಾಶಿ ಧಾರವಾಡಕ್ಕೇ ಐಐಟಿ ನೀಡಬೇಕು ಎಂಬ ದೊಡ್ಡಮಟ್ಟದ ಕೂಗು ಹಾಗೂ ಹೋರಾಟಗಳೂ ನಡೆದವು.

ಧಾರವಾಡದಲ್ಲಿ ಐಐಟಿ ಸ್ಥಾಪನೆಯಾಗುತ್ತದೋ ಇಲ್ಲವೋ ಎಂಬ ಗೊಂದಲ ಇದ್ದಾಗಲೇ 2016ರ ಆಗಸ್ಟ್‌ನಲ್ಲಿ ರಾಷ್ಟ್ರಪತಿಯಾಗಿದ್ದ ಪ್ರಣವ ಮುಖರ್ಜಿ ಅವರು ತಿದ್ದುಪಡಿ ಕಾಯ್ದೆಗೆ ಸಹಿ ಹಾಕುವ ಮೂಲಕ ಧಾರವಾಡದಲ್ಲಿ ಐಐಟಿ ಸ್ಥಾಪನೆಗೆ ದಾರಿದೀಪವಾಯಿತು.

ಧಾರವಾಡ ಐಐಟಿ ಸದ್ಯ ಮುಮ್ಮಿಗಟ್ಟಿ ಬಳಿಯ ವಾಲ್ಮಿ ಕಟ್ಟಡದಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಕ್ಯಾಂಪಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಶಾಶ್ವತ ಕ್ಯಾಂಪಸ್ ಸ್ಥಾಪನೆಗೆ ಜಾಗ 470 ಎಕರೆ ಜಾಗವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿತ್ತು. ಪ್ರಣವ ಮುಖರ್ಜಿ ಅವರು ಅಗಲಿದ ಬೆನ್ನಲ್ಲೇ ಜಿಲ್ಲೆಯ ಜನತೆ ಐಐಟಿ ಸ್ಥಾಪನೆಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT