ಗುರುವಾರ , ಸೆಪ್ಟೆಂಬರ್ 23, 2021
22 °C

ಅಹಮದಾಬಾದ್‌ನಲ್ಲಿ ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾದರೇ ಚಿರಾಗ್ ಪಾಸ್ವಾನ್?

ಪಿಟಿಐ Updated:

ಅಕ್ಷರ ಗಾತ್ರ : | |

ಅಹಮದಾಬಾದ್: ಬಿಹಾರದ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಆಂತರಿಕ ಬಿಕ್ಕಟ್ಟಿನ ನಡುವೆಯೇ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರು ಅಹಮದಾಬಾದ್‌ಗೆ ಭೇಟಿ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರನ್ನು ಭೇಟಿಯಾಗಲು ಅವರು ನಗರಕ್ಕೆ ಬಂದಿದ್ದಾರೆ ಎಂಬ ವದಂತಿ ಹಬ್ಬಿದೆ.

ಈ ಕುರಿತು ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಅವರು, ಇದೊಂದು ಖಾಸಗಿ ಭೇಟಿ ಎಂದಿದ್ದಾರೆ.

ಓದಿ: ಬಿಜೆಪಿಯ ಮೌನ ನೋವುಂಟು ಮಾಡಿದೆ: ಎಲ್‌ಜೆಪಿ ನಾಯಕ ಚಿರಾಗ್ ಪಾಸ್ವಾನ್

ಕೇಂದ್ರದ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರನಾಗಿರುವ ಚಿರಾಗ್‌ರನ್ನು ಅವರ ಚಿಕ್ಕಪ್ಪ ಮತ್ತು ಹಾಜಿಪುರದ ಸಂಸದ ಪಶುಪತಿ ಕುಮಾರ್ ಪರಾಸ್ ಅವರ ಬಣ ಪಕ್ಷದ ಮುಖ್ಯಸ್ಥನ ಸ್ಥಾನದಿಂದ ವಜಾಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಕ್ರಮ ಕೈಗೊಂಡಿದ್ದ ಚಿರಾಗ್, ಎಲ್‌ಜೆಪಿಯ ಬಿಹಾರ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದರು.

ಆರು ಮಂದಿ ಸಂಸದರನ್ನು ಹೊಂದಿರುವ ಪಕ್ಷದ ಐವರು ಸಂಸದರು ಇತ್ತೀಚೆಗೆ ಚಿರಾಗ್ ನಾಯಕತ್ವದ ವಿರುದ್ಧ ಬಂಡಾಯವೆದ್ದು ಅವರನ್ನು ಸಂಸದೀಯ ಪಕ್ಷದ ನಾಯಕದ ಸ್ಥಾನದಿಂದ ತೆರವುಗೊಳಿಸಿದ್ದರು.

ಓದಿ: 

ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿ ತಮ್ಮ ನೆರವಿಗೆ ಬಾರದಿರುವುದು ನೋವುಂಟು ಮಾಡಿದೆ ಎಂದೂ ಚಿರಾಗ್ ಇತ್ತೀಚೆಗೆ ಹೇಳಿದ್ದರು.

ರಾಮ್ ವಿಲಾಸ್ ಪಾಸ್ವಾನ್ ಅವರ ಜನ್ಮದಿನದ ಸಂದರ್ಭ, ಜುಲೈ 5ರಿಂದ ಹಾಜಿಪುರದಿಂದ ‘ಆಶೀರ್ವಾದ ಯಾತ್ರೆ’ ನಡೆಸುವುದಾಗಿ ಇತ್ತೀಚೆಗೆ ಚಿರಾಗ್ ಘೋಷಿಸಿದ್ದರು.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು