ನವದೆಹಲಿ (ಪಿಟಿಐ): ‘ಧರ್ಮ ಆಧಾರಿತ ಮೀಸಲಾತಿಯು ಸಂವಿಧಾನದ ಉಲ್ಲಂಘನೆ ಆಗುತ್ತದೆ’ ಎಂದು ಹೇಳಿರುವ ಗೃಹ ಸಚಿವ ಅಮಿತ್ ಶಾ ವಿರುದ್ಧ ಸೋಮವಾರ ಹರಿಹಾಯ್ದಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ‘ಧರ್ಮ ಆಧಾರಿತ ರಾಜಕೀಯ ಮತ್ತು ಧರ್ಮ ಆಧಾರಿತ ಪ್ರಚಾರವು ಸಂವಿಧಾನದ ಉಲ್ಲಂಘನೆ ಆಗುತ್ತದೆಯೋ ಅಥವಾ ಇಲ್ಲವೋ’ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ನೀಡಲಾಗಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದುಪಡಿಸಿ, ಅದನ್ನು ಒಕ್ಕಲಿಗರು ಮತ್ತು ಲಿಂಗಾಯತ ಸಮುದಾಯದವರಿಗೆ ತಲಾ ಶೇ 2ರಷ್ಟು ಹಂಚಿಕೆ ಮಾಡಿರುವ ಕರ್ನಾಟಕ ಸರ್ಕಾರದ ನಿರ್ಧಾರವನ್ನು ಅಮಿತ್ ಶಾ ಭಾನುವಾರ ಶ್ಲಾಘಿಸಿದ್ದರು. ಅಲ್ಲದೆ ಧರ್ಮದ ಆಧಾರದ ಮೇಲೆ ನೀಡುವ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ, ಅದು ಅಮಾನ್ಯವಾಗುತ್ತದೆ ಎಂದಿದ್ದರು.
‘ಅಮಿತ್ ಶಾ ಅವರ ಪ್ರಕಾರ ಧರ್ಮ ಆಧಾರಿತ ಮೀಸಲಾತಿಯು ಸಂವಿಧಾನ ಉಲ್ಲಂಘನೆ ಆಗುತ್ತದೆ. ಹಾಗಾದರೆ ಧರ್ಮ ಆಧಾರಿತ ರಾಜಕೀಯ, ಪ್ರಚಾರ, ಭಾಷಣಗಳು, ಕಾರ್ಯಸೂಚಿ ಮತ್ತು ಕಾರ್ಯಕ್ರಮಗಳ ಬಗ್ಗೆ ಏನು ಹೇಳುವುದು. ಅವು ಸಂವಿಧಾನವನ್ನು ಉಲ್ಲಂಘಿಸುವುದಿಲ್ಲವೇ?’ ಎಂದು ಸಿಬಲ್ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.