ಗುವಾಹಟಿ: 11 ವರ್ಷದ ಬಾಲಕನ ಮೇಲೆ ಬಿಸಿ ನೀರು ಸುರಿದ ಆರೋಪದಡಿ ಅಸ್ಸಾಂನ ದಿಬ್ರು ಜಿಲ್ಲೆಯಲ್ಲಿ ದಂಪತಿಯನ್ನು ಬಂಧಿಸಲಾಗಿದೆ.
ಅಸ್ಸಾಂ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಸಿದ್ಧಿಪ್ರದಾದ್ ಡೆಓರಿ ಮತ್ತು ಅವರ ಪತ್ನಿ, ಮೊರಾನ್ ಕಾಲೇಜಿನ ಪ್ರಾಶುಂಪಾಲೆ ಮಿಥಾಲಿ ಕೊನಾವರ್ ಡೆಓರಿ ಅವರು, ಮನೆಗೆಲಸದ ಬಾಲಕನ ಮೇಲೆ ಬಿಸಿ ನೀರು ಸುರಿದು,ಚಿಕಿತ್ಸೆಯನ್ನೂ ನೀಡದೆ ಆತನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ದಂಪತಿ ವಿರುದ್ಧ ಪ್ರಕರಣ ದಾಖಲಿಸಲಾದ ಬೆನ್ನಲ್ಲೇ ಪತಿ–ಪತ್ನಿ ಪರಾರಿಯಾಗಿದ್ದರು. ಆದರೆ ಗುವಾಹಟಿಯಿಂದದಿಬ್ರುಗರ್‌ಗೆ ಪ್ರಯಣಿಸುತ್ತಿದ್ದಆರೋಪಿಗಳಿಬ್ಬರನ್ನು ಕೇಂದ್ರ ಅಸ್ಸಾಂನ ನಾಗಾನ್‌ದಲ್ಲಿ ಶನಿವಾರ ಪೊಲೀಸರು ಬಂಧಿಸಿದ್ದಾರೆ.
ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿ ಪುತ್ರ ಮತ್ತು ಮಗಳನ್ನು ಕೂಡ ಬಂಧಿಸಲಾಗಿತ್ತು.
ಆ. 29 ರಂದುವ್ಯಕ್ತಿಯೊಬ್ಬ ಹಂಚಿಕೊಂಡ ವಿಡಿಯೊದ ಆಧಾರದ ಮೇರೆಗೆದಿಬ್ರುಗರ್ ಮಕ್ಕಳ ರಕ್ಷಣಾ ಸಮಿತಿಯು ದಂಪತಿಯ ಮನೆ ಮೇಲೆ ದಾಳಿ ನಡೆಸಿ, ಬಾಲಕನನ್ನು ರಕ್ಷಿಸಿತ್ತು. ಈ ವೇಳೆ ಆತನ ದೇಹದ ಮೇಲೆ ಸುಟ್ಟ ಗಾಯಗಳು ಪತ್ತೆಯಾಗಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.