ಬುಧವಾರ, ಜುಲೈ 28, 2021
21 °C

ಕೋವಿಶೀಲ್ಡ್‌: ಎರಡು ಡೋಸ್‌ ನಡುವಣ ಅಂತರ ಮೊದಲಿನಂತಿರಲಿ: ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಶೀಲ್ಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಣ ಅಂತರವನ್ನು ಈ ಮೊದಲಿನಂತೆ 6 ರಿಂದ 8 ವಾರ ನಿಗದಿಪಡಿಸುವಂತೆ ‘ಪ್ರೊಗ್ರೆಸಿವ್‌ ಮೆಡಿಕೋಸ್‌ ಆ್ಯಂಡ್‌ ಸೈಂಟಿಸ್ಟ್‌ ಫೋರಂ’ ಎಂಬ ಸಂಘಟನೆ ಶುಕ್ರವಾರ ಒತ್ತಾಯಿಸಿದೆ.

ಲಸಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸಲಹಾ ಸಮಿತಿಯ (ಎನ್‌ಟಿಎಜಿಐ) ಶಿಫಾರಸಿನಂತೆ ಕೇಂದ್ರ ಸರ್ಕಾರವು ಲಸಿಕೆಯ ಎರಡು ಡೋಸ್‌ಗಳ ನಡುವಣ ಅಂತರವನ್ನು 12 –16 ವಾರಗಳಿಗೆ ವಿಸ್ತರಿಸಿ, ಮೇ 13ರಂದು ಅನುಮೋದಿಸಿತ್ತು.

‘ಎರಡು ಡೋಸ್‌ಗಳ ನಡುವಿನ ಅಂತರವನ್ನು ಮೊದಲಿನಂತೆ ನಿಗದಿಗೊಳಿಸುವ ಜೊತೆಗೆ, ಬೃಹತ್ ಪ್ರಮಾಣದಲ್ಲಿ ಲಸಿಕೆಯನ್ನು ಖರೀದಿಸಿ, ಲಸಿಕೆ ಕಾರ್ಯಕ್ರಮಕ್ಕೆ ವೇಗ ನೀಡಬೇಕು’ ಎಂದೂ ಸಂಘಟನೆ ಒತ್ತಾಯಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು