ಬುಧವಾರ, ಅಕ್ಟೋಬರ್ 21, 2020
25 °C

ಕೋವಿಡ್‌ಗೆ ನನ್ನಲ್ಲಿ ಪ್ರತಿರೋಧವಿದೆ ಎಂದ ಡೊನಾಲ್ಡ್‌ ಟ್ರಂಪ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರಕ್ಕೆ ಹಾದಿಗೆ ಮರಳಲು ಸಿದ್ಧತೆ ನಡೆಸುತ್ತಿರುವ ಡೊನಾಲ್ಡ್‌ ಟ್ರಂಪ್ ಅವರು ತಾವು ಕೋವಿಡ್‌ ವಿರುದ್ಧ ಪ್ರತಿರೋಧಕ ಶಕ್ತಿ ಹೊಂದಿರುವುದಾಗಿ ಹೇಳಿದ್ದಾರೆ.

ಅಮೆರಿಕದ ಸುದ್ದಿ ವಾಹಿನಿ 'ಫಾಕ್ಸ್‌ ನ್ಯೂಸ್‌'ಗೆ ನೀಡಿರುವ ಸಂದರ್ಶನದಲ್ಲಿ ಭಾನುವಾರ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಕೋವಿಡ್‌ಗೆ ನಾನು ರೋಗನಿರೋಧಕನೆಂಬಂತೆ ತೋರುತ್ತಿದೆ. ನನ್ನೊಳಗಿನ ರೋಗ ಪ್ರತಿರೋಧವು ದೀರ್ಘಕಾಲೀನವಾಗಿರಬಹುದು, ಅಲ್ಪಕಾಲೀನವಾಗಿರಬಹುದು, ಅಥವಾ ಶಾಶ್ವತವಾಗಿರಬಹುದು. ಇದರ ಬಗ್ಗೆ ನನಗೂ ಗೊತ್ತಿಲ್ಲ. ಯಾರಿಗೂ ಗೊತ್ತಿಲ್ಲ. ಆದರೆ, ನಾನು ಮಾತ್ರ ಕೋವಿಡ್‌ಗೆ ಪ್ರತಿಯಾಗಿ ರೋಗ ಪ್ರತಿರೋಧಕತನವನ್ನು ಹೊಂದಿದ್ದೇನೆ,’ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಕೊರೊನಾ ವೈರಸ್‌ ಸೊಂಕಿಗೆ ಒಳಗಾಗಿದ್ದ ಡೊನಾಲ್ಡ್‌ ಟ್ರಂಪ್‌, ಮೂರು ದಿನ ಸೇನೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯಿಂದ ಶ್ವೇತ ಭವನಕ್ಕೆ ಬಂದವರೇ ಮಾಸ್ಕ್‌ ತೆಗೆದು ವಿವಾದಕ್ಕೂ ಕಾರಣರಾಗಿದ್ದರು.

ಟ್ರಂಪ್‌ ಅವರು ಪ್ರಚಾರದಲ್ಲಿ ತೊಡಗಬಹುದು ಎಂದು ಈಗಾಗಲೇ ವೈದ್ಯರೂ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ನವೆಂಬರ್‌ ಮೂರಕ್ಕೆ ನಿಗದಿಯಾಗಿದ್ದು, ಚುನಾವಣೆ ಪ್ರಚಾರಗಳು ನಡೆಯುತ್ತಿವೆ. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಅವರು ಚುನಾವಣೆಯಲ್ಲಿ ಟ್ರಂಪ್‌ಗೆ ಭಾರಿ ಪ್ರತಿರೋಧವೊಡ್ಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು