ಮಂಗಳವಾರ, ಮೇ 11, 2021
22 °C

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ: ₹ 22 ಕೋಟಿ ಮೊತ್ತದ 15 ಸಾವಿರ ಚೆಕ್‌ಗಳು ಬೌನ್ಸ್

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್‌ ದೇಶದಾದ್ಯಂತ ದೇಣಿಗೆಯಾಗಿ ಸಂಗ್ರಹಿಸಿರುವ ₹ 22 ಕೋಟಿ ಮೊತ್ತದ ವಿವಿಧ ಬ್ಯಾಂಕ್‌ಗಳ 15 ಸಾವಿರ ಚೆಕ್‌ಗಳು ಬೌನ್ಸ್‌ ಆಗಿವೆ!

ಮಂದಿರ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಆಡಿಟ್‌ ವರದಿಯ ಪ್ರಕಾರ, ‘ಬ್ಯಾಂಕ್‌ ಖಾತೆಗಳಲ್ಲಿ ಹಣದ ಕೊರತೆ ಅಥವಾ ತಾಂತ್ರಿಕ ದೋಷದಿಂದಾಗಿ ಚೆಕ್‌ಗಳು ಬೌನ್ಸ್‌ ಆಗಿವೆ‘. ಈ ಬೌನ್ಸ್‌ ಆಗಿರುವ ಚೆಕ್‌ಗಳಲ್ಲಿ ಎರಡು ಸಾವಿರದಷ್ಟು ಚೆಕ್‌ಗಳು ಅಯೋಧ್ಯೆಯಿಂದಲೇ ಸಂಗ್ರಹವಾಗಿವೆ.

‘ತಾಂತ್ರಿಕ ತೊಂದರೆಯನ್ನು ಪರಿಹರಿಸುತ್ತಿರುವ ಬ್ಯಾಂಕ್‌ಗಳು, ಕೆಲವರಿಗೆ ಪುನಃ ದೇಣಿಗೆ ನೀಡುವಂತೆ ತಿಳಿಸುತ್ತಿವೆ‘ ಎಂದು ಟ್ರಸ್ಟ್‌ ಸದಸ್ಯ ಡಾ. ಅನಿಲ್ ಮಿಶ್ರಾ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಜನವರಿ 15 ರಿಂದ ಫೆಬ್ರವರಿ 17ರವರೆಗೆ ದೇಶದಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ಕೈಗೊಂಡಿತ್ತು. ಈ ಅಭಿಯಾನದಲ್ಲಿ ಸುಮಾರು ₹5ಸಾವಿರ ಕೋಟಿ ಹಣ ಸಂಗ್ರಹವಾಗಿದೆ ಎಂದು ಹೇಳಲಾಗುತ್ತಿದ್ದು, ಒಟ್ಟು ಸಂಗ್ರಹವಾಗಿರುವ ದೇಣಿಗೆ ಕುರಿತ ಮಾಹಿತಿಯನ್ನು ಟ್ರಸ್ಟ್‌ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು