ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಟ್ಲಾಂಟಾ ಗುಂಡಿನ ದಾಳಿಯ ಸಂತ್ರಸ್ತರಿಗೆ ಹರಿದು ಬರುತ್ತಿದೆ ನೆರವಿನ ಮಹಾಪೂರ

ಅಂಟ್ಲಾಂಟಾದ ಮಸಾಜ್ ಪಾರ್ಲರ್ ಮೇಲಿನ ಗುಂಡಿನ ದಾಳಿ ಪ್ರಕರಣ
Last Updated 22 ಮಾರ್ಚ್ 2021, 11:02 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಟ್ಲಾಂಟಾದಲ್ಲಿ ಮಸಾಜ್‌ ಪಾರ್ಲರ್‌ಗಳ ಮೇಲೆ ನಡೆದ ಗುಂಡಿನ ದಾಳಿಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ನೆರವಿನ ಮಹಾಪೂರವೇ ಹರಿದು ಬರುತ್ತಿದೆ.

ಗುಂಡಿನ ದಾಳಿಗೆ ಬಲಿಯಾಗಿದ್ದ ತನ್ನ ತಾಯಿಯ ಅಂತ್ಯಕ್ರಿಯೆ ನಡೆಸಲು ರ‍್ಯಾಂಡಿ ಪಾರ್ಕ್‌ ಫೇಸ್‌ಬುಕ್‌ನಲ್ಲಿ'GoFundMe' ಪೇಜ್‌ ಮೂಲಕ 20 ಸಾವಿರ ಡಾಲರ್ (₹14,48,730) ಹಣಕ್ಕಾಗಿ ಮನವಿ ಮಾಡಿದ್ದರು. ಭಾನುವಾರದ ವೇಳೆಗೆ ಅವರ ಖಾತೆಯಲ್ಲಿ 30 ಲಕ್ಷ ಡಾಲರ್ ‌(₹21,72,88,500) ಹಣ ಸಂಗ್ರಹವಾಗಿತ್ತು.

ಈ ಸಂತ್ರಸ್ತ ಕುಟುಂಬಗಳಿಗೆ ದೇಣಿಗೆ ನೀಡುವುದಷ್ಟೇ ಅಲ್ಲದೇ, ಬೇರೆ ಬೇರೆ ವಿಧದಲ್ಲಿ ನೆರವಾಗಲು ಹಲವು ಜನರು ಮುಂದಾಗಿದ್ದಾರೆ. ರ‍್ಯಾಂಡಿ ಪಾರ್ಕ್‌ ಮತ್ತಿತರರು ಆರಂಭಿಸಿರುವ ಈ ದೇಣಿಗೆ ಸಂಗ್ರಹಕ್ಕೆ ಸಾವಿರಾರು ಮಂದಿ ಕೈ ಜೋಡಿಸಿದ್ದು, ನಿಗದಿತ ಗುರಿಗಿಂತ ಹೆಚ್ಚು ಹಣ ಸಂಗ್ರಹವಾಗಿದೆ.

‘ನನಗೆ ಹಣದ ಮೌಲ್ಯ ಏನು ಎಂಬುದೇ ಗೊತ್ತಿರಲಿಲ್ಲ. ಆದರೆ, ಈಗ ಕೈ ಸೇರಿರುವ ಹಣವನ್ನು ಅಗತ್ಯ ಸಂದರ್ಭದಲ್ಲಿ ಮಾತ್ರ ಬಳಸುತ್ತೇನೆ’ ಎಂದುಮಸಾಜ್‌ಪಾರ್ಲರ್‌ಮೇಲೆನಡೆದ ದಾಳಿ ವೇಳೆ ಕೊಲೆಯಾದ ಹಿನ್‌ ಜಂಗ್‌ ಗ್ರ್ಯಾಂಟ್‌ (51) ಎಂಬುವವರ ಮಗ ಪಾರ್ಕ್‌ ಬರೆದಿದ್ದಾರೆ.

ಇಲ್ಲಿಯವರೆಗೆ, ಗುಂಡಿನಿಂದ ದಾಳಿಗೊಳಗಾಗಿರುವ ಸಂತ್ರಸ್ತರ ಕುಟುಂಬಗಳಿಗೆ ಸಹಾಯ ಮಾಡಲು ಸರ್ಕಾರ ಯಾವುದೇ ಕೇಂದ್ರ ನಿಧಿಯನ್ನು ಸ್ಥಾಪಿಸಿಲ್ಲ. ಆದರೆ, ಈ ಹಿಂದೆ ನಡೆದ ಇಂಥದ್ದೇ ಸಾಮೂಹಿಕ ಗುಂಡಿನ ದಾಳಿಯ ಸಂತ್ರಸ್ತರಿಗೆ ಧನ ಸಹಾಯ ಮಾಡಲು ಸಮಿತಿಯನ್ನು‌ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT