ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಚಿತ್ರಣಕ್ಕೆ ಹಾನಿಯಾಗುವಂತದ್ದನ್ನು ಮಾಡಬಾರದು, ಹೇಳಬಾರದು: ವೆಂಕಯ್ಯ ನಾಯ್ಡು

Last Updated 13 ಮಾರ್ಚ್ 2021, 16:06 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಚಿತ್ರಣವನ್ನು ಹಾಳುಮಾಡುವ ಯಾವುದನ್ನೂ ಮಾಡಬಾರದು ಅಥವಾ ಹೇಳಬಾರದು. ಹಾಗೇನಾದರೂ ಮಾಡಿದರೆ ಭಾರತದ ವಿರುದ್ಧವೇ ಶತ್ರುಗಳು ಇದನ್ನು ಬಳಸಿಕೊಳ್ಳಬಹುದು ಎಂದುಉಪ ರಾಷ್ಟ್ರಪತಿ, ರಾಜ್ಯಸಭಾಧ್ಯಕ್ಷ ಎಂ. ವೆಂಕಯ್ಯ ನಾಯ್ಡು ಅವರು ಸದನದ ಸದಸ್ಯರನ್ನು ಒತ್ತಾಯಿಸಿದರು.

ಮೇಲ್ಮನೆಯ ಹೊಸ ಸದಸ್ಯರಿಗಾಗಿ ಎರಡು ದಿನಗಳ ಒರಿಯಂಟೇಷನ್‌ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿ, 'ಚರ್ಚಿಸಿ, ಚರ್ಚಿಸಿ ಮತ್ತು ನಿರ್ಧರಿಸಿ' ಎಂಬುದು ಪ್ರಜಾಪ್ರಭುತ್ವದ ಮಂತ್ರವಾಗಿದೆ ಮತ್ತು ಸದಸ್ಯರು ಸದನಕ್ಕೆ ಅಡ್ಡಿಪಡಿಸುವುದನ್ನೇ ಅವಲಂಬಿಸಬಾರದು ಎಂದು ನಾಯ್ಡು ಒತ್ತಿ ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಮುಕ್ತ ಬರವಣಿಗೆ ಮತ್ತು ಅಭಿವ್ಯಕ್ತಿಗೆ ಅವಕಾಶವಿದ್ದರೂ, ಆ ಮೂಲಕ 'ಸಮಾಜದಲ್ಲಿ ಅಸಮಾಧಾನವನ್ನು ಉಂಟುಮಾಡಬಾರದು'. ನಿಯಮಗಳಿಗೆ ಅಡ್ಡಿಪಡಿಸದಂತೆ ಸದಸ್ಯರಿಗೆ ಕರೆ ನೀಡಿದ ಅವರು, ವಿರೋಧ ಪಕ್ಷದ ಸದಸ್ಯರು ನಿಯಮ 267 ಅನ್ನು ಅಪರೂಪದ ಸಂದರ್ಭಗಳಲ್ಲಿ 'ಬ್ರಹ್ಮಾಸ್ತ್ರ'ವಾಗಿ ಅಥವಾ ಅಸಾಮಾನ್ಯ ಸಂದರ್ಭಗಳಲ್ಲಿ ಬಳಸಬೇಕು ಎಂದು ಹೇಳಿದರು.

'ಕೆಲವು ನಿಯಮಗಳಿಗೆ ಪದೇ ಪದೇ ಸಹಾಯ ಮಾಡುವ ಕಾರಣದಿಂದಾಗಿ ಸದನವು ಆಗಾಗ್ಗೆ ಸಮಸ್ಯೆಗಳಿಗೆ ಸಿಲುಕುತ್ತದೆ'. ನೀವು (ನಿಯಮ) 267ರ ಸಹಾಯವನ್ನು ಪಡೆಯಲು ಪ್ರಾರಂಭಿಸಿದರೆ, ನೀವು ಸದನವನ್ನು ನಡೆಸಲು ಸಾಧ್ಯವಾಗುವುದಿಲ್ಲ. ಇದನ್ನು ಬಹಳ ವಿರಳವಾಗಿ ಬಳಸಲಾಗುತ್ತದೆ. ಇತರ 'ಅಸ್ತ್ರಗಳು' ಯಶಸ್ವಿಯಾಗದಿದ್ದಾಗ ಮಾತ್ರ ಇದನ್ನು 'ಬ್ರಹ್ಮಾಸ್ತ್ರ'ದ ರೀತಿಯಲ್ಲಿ ಬಳಸಲಾಗುತ್ತದೆ. ನೀವು (ಆಗಾಗ್ಗೆ) 'ಬ್ರಹ್ಮಾಸ್ತ್ರ'ವನ್ನು ಕೈಗೆತ್ತಿಕೊಂಡರೆ, ಅದು ಕೂಡ 'ಅಸ್ತ್ರ'ವಾಗಿ ಬದಲಾಗುತ್ತದೆ ಎಂದು ಅವರು ಹೊಸ ಸದಸ್ಯರಿಗೆ ತಿಳಿಸಿದರು.

ನಿಯಮ 267ನ್ನು ಬಳಸಿದರೆ ಈ ವಿಷಯದ ಬಗ್ಗೆ ಚರ್ಚೆಯನ್ನು ಕೈಗೆತ್ತಿಕೊಳ್ಳಲು ದಿನದ ಇತರ ವಿಚಾರಗಳನ್ನು ಬದಿಗಿರಿಸಬೇಕಾಗುತ್ತದೆ. ಕಳೆದ ವಾರ ನಡೆಯುತ್ತಿದ್ದ ಬಜೆಟ್ ಅಧಿವೇಶನದಲ್ಲಿ ರೈತರ ಸಮಸ್ಯೆಗಳು ಮತ್ತು ಹೆಚ್ಚಿನ ಇಂಧನ ಬೆಲೆಗಳಂತಹ ವಿಷಯಗಳ ಬಗ್ಗೆ ಚರ್ಚಿಸಲು ಇದನ್ನು ವಿರೋಧ ಪಕ್ಷದ ಸದಸ್ಯರು ಉಲ್ಲೇಖಿಸಿದ್ದಾರೆ.

ಒಗ್ಗೂಡಿದ ಮತ್ತು ಅಂತರ್ಗತ ಭಾರತಕ್ಕಾಗಿ ಮಾತನಾಡಲು ಮತ್ತು ಕೆಲಸ ಮಾಡುವಂತೆ ಸದಸ್ಯರನ್ನು ಒತ್ತಾಯಿಸಿ, ನಮಗೆ ರಾಜಕೀಯ ಭಿನ್ನಾಭಿಪ್ರಾಯಗಳಿರಬಹುದು. ನಾವು ಪರಸ್ಪರ ವಿರೋಧಿಸುತ್ತೇವೆ. ಆದರೆ ದೇಶದ ವಿಚಾರ ಬಂದಾಗ, ನಾವು ಏನನ್ನೂ ಮಾಡಬಾರದು ಅಥವಾ ನಮ್ಮ ದೇಶದ ಚಿತ್ರಣವನ್ನು ಹಾಳುಮಾಡುವ ಯಾವುದನ್ನೂ ಹೇಳಬಾರದು, ಅದನ್ನು ನಮ್ಮ ಶತ್ರುಗಳು ಬಳಸಿಕೊಳ್ಳುತ್ತಾರೆ ಮತ್ತು ಇದನ್ನು ಭಾರತೀಯ ಸಂಸತ್ತಿನಲ್ಲಿ ಹೇಳಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT