ಬುಧವಾರ, ಜೂನ್ 29, 2022
21 °C

‘2–ಡಿಜಿ’ ಔಷಧ ಉತ್ಪಾದನೆ: ಕಂಪನಿಗಳಿಂದ ಅರ್ಜಿ ಆಹ್ವಾನಿಸಿದ ಡಿಆರ್‌ಡಿಒ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಕೋವಿಡ್‌–19 ಚಿಕಿತ್ಸೆಗಾಗಿ ತಾನು ಅಭಿವೃದ್ಧಿಪಡಿಸಿರುವ ‘2–ಡಿಜಿ’ ಔಷಧವನ್ನು ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆ ಮಾಡುವ ಸಂಬಂಧ ತಂತ್ರಜ್ಞಾನವನ್ನು ವರ್ಗಾಯಿಸಲು ಮುಂದಾಗಿದೆ.

ತಂತ್ರಜ್ಞಾನ ವರ್ಗಾವಣೆಗೆ ಆಸಕ್ತಿ ಹೊಂದಿರುವ ದೇಶದ ಔಷಧ ಕಂಪನಿಗಳಿಂದ ಡಿಆರ್‌ಡಿಒ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಜೂನ್‌ 17 ಕೊನೆಯ ದಿನವಾಗಿದೆ.

‘ತಂತ್ರಜ್ಞಾನ ಹಾಗೂ ಉತ್ಪಾದನಾ ಸಾಮರ್ಥ್ಯವನ್ನು ಪರಿಗಣಿಸಿ, ಕೇವಲ 15 ಕಂಪನಿಗಳಿಗೆ ಮಾತ್ರ ತಂತ್ರಜ್ಞಾನ ವರ್ಗಾವಣೆ ಮಾಡಲಾಗುವುದು. ಮೊದಲು ಬಂದವರಿಗೆ ಆದ್ಯತೆ ಆಧಾರದಲ್ಲಿ ಕಂಪನಿಗಳ ಆಯ್ಕೆ ನಡೆಯುವುದು’ ಎಂದು ಡಿಆರ್‌ಡಿಒ ತಿಳಿಸಿದೆ.

‘ಕಂಪನಿಗಳು ಸಲ್ಲಿಸುವ ಪ್ರಸ್ತಾವನೆಗಳನ್ನು ತಾಂತ್ರಿಕ ಮೌಲ್ಯಮಾಪನ ಸಮಿತಿಯು ಪರಿಶೀಲಿಸಿ, ಅಂತಿಮ ನಿರ್ಧಾರ ಕೈಗೊಳ್ಳುವುದು’ ಎಂದೂ ತಿಳಿಸಿದೆ.

ಡಿಆರ್‌ಡಿಒದ ಅಂಗಸಂಸ್ಥೆಯಾದ ‘ಇನ್ಸ್‌ಟಿಟ್ಯೂಟ್‌ ಆಫ್‌ ನ್ಯೂಕ್ಲಿಯರ್ ಮೆಡಿಸಿನ್‌ ಆ್ಯಂಡ್‌ ಅಲೈಡ್‌ ಸೈನ್ಸಸ್‌’ (ಐಎನ್‌ಎಂಎಎಸ್‌), ಡಾ.ರೆಡ್ಡೀಸ್‌ ಲ್ಯಾಬೊರೇಟರೀಸ್‌ನ ಸಹಯೋಗದಲ್ಲಿ ‘2–ಡಿಆಕ್ಸಿ–ಡಿ–ಗ್ಲುಕೋಸ್‌’ (2–ಡಿಜಿ) ಔಷಧಿಯನ್ನು ಅಭಿವೃದ್ಧಿಪಡಿಸಿದೆ.

ಈ ಔಷಧವು ಕೋವಿಡ್‌–19 ರೋಗಿಗಳಲ್ಲಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಿ, ರೋಗಿಗಳು ತ್ವರಿತವಾಗಿ ಗುಣಮುಖರಾಗಿರುವುದು ಕ್ಲಿನಿಕಲ್‌ ಟ್ರಯಲ್‌ಗಳಲ್ಲಿ ಕಂಡುಬಂದಿದೆ.

2–ಡಿಜಿ ಔಷಧದಿಂದ ಚಿಕಿತ್ಸೆ ನೀಡಲಾದ ಕೋವಿಡ್‌–19 ರೋಗಿಗಳ ಪೈಕಿ ಹೆಚ್ಚಿನ ರೋಗಿಗಳ ಆರ್‌ಟಿ–ಪಿಸಿಆರ್‌ ವರದಿ ನೆಗೆಟಿವ್‌ ಬಂದಿರುವುದು ಸಹ ಗಮನಾರ್ಹ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು