ಸೋಮವಾರ, ಡಿಸೆಂಬರ್ 6, 2021
24 °C

ದೆಹಲಿ ಮೆಟ್ರೊ: ಗುಲಾಬಿ ಮಾರ್ಗದಲ್ಲಿ ಚಾಲಕರಹಿತ ರೈಲು ಸಂಚಾರಕ್ಕೆ ಹಸಿರು ನಿಶಾನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿ ಮೆಟ್ರೊದ ಗುಲಾಬಿ ಮಾರ್ಗದಲ್ಲಿ ಚಾಲಕರಹಿತ ರೈಲು ಸಂಚಾರಕ್ಕೆ ಗುರುವಾರ ಹಸಿರು ನಿಶಾನೆ ತೋರಿಸಲಾಯಿತು.

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ದೆಹಲಿ ಸಾರಿಗೆ ಸಚಿವ ಕೈಲಾಶ್‌ ಗೆಹಲೋತ್‌ ಜಂಟಿಯಾಗಿ ವಿಡಿಯೊ ಕಾನ್ಸರೆನ್ಸ್‌ ಮೂಲಕ ಈ ರೈಲಿನ ಸಂಚಾರಕ್ಕೆ ಚಾಲನೆ ನೀಡಿದರು.

ಸಚಿವ ಪುರಿ ಮಾತನಾಡಿ, ‘ವರ್ಷದೊಳಗೆ ದೆಹಲಿ ಮೆಟ್ರೊ ಮಾರ್ಗದಲ್ಲಿ ಚಾಲಕರಹಿತ ಎರಡನೇ ರೈಲಿನ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ವಿಶ್ವದ ಹಲವು ನಗರಗಳಲ್ಲಿನ ಮೆಟ್ರೊ ರೈಲು ವ್ಯವಸ್ಥೆಯನ್ನು ನಾನು ನೋಡಿದ್ದೇನೆ. ಅವುಗಳಿಗೆ ಹೋಲಿಸಿದಾಗ ದೆಹಲಿ ಮೆಟ್ರೊ ಸೇವೆ ಅತ್ಯುತ್ತಮವಾಗಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ’ ಎಂದರು.

ಗುಲಾಬಿ ಮಾರ್ಗದ ಉದ್ದ 59 ಕಿ.ಮೀ. ಇದರೊಂದಿಗೆ ದೆಹಲಿ ಮೆಟ್ರೊದಲ್ಲಿ ಚಾಲಕರಹಿತ ರೈಲು ಸಂಚರಿಸುವ ಮಾರ್ಗದ ಒಟ್ಟು ಉದ್ದ 97 ಕಿ.ಮೀ. ಆದಂತಾಗಿದೆ.

ದೇಶದ ಮೊದಲ ಚಾಲಕರಹಿತ ಮೆಟ್ರೊ ರೈಲು ಸಂಚಾರ ಇಲ್ಲಿನ ಕೆನ್ನೇರಳೆ ಮಾರ್ಗದಲ್ಲಿ ಆರಂಭವಾಯಿತು. ಕಳೆದ ವರ್ಷ ಡಿಸೆಂಬರ್‌ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಮಾರ್ಗವನ್ನು ಉದ್ಘಾಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು