ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಮೆಟ್ರೊ ಹಳಿ ಮೇಲೆ ಬಿದ್ದ ಡ್ರೋನ್‌: ಅರ್ಧ ಗಂಟೆ ಸೇವೆ ಸ್ಥಗಿತ

Last Updated 25 ಡಿಸೆಂಬರ್ 2022, 12:55 IST
ಅಕ್ಷರ ಗಾತ್ರ

ನವದೆಹಲಿ: ವೈದ್ಯಕೀಯ ಉತ್ಪನ್ನಗಳನ್ನು ಪೂರೈಕೆ ಮಾಡುತ್ತಿದ್ದ ಡ್ರೋನ್‌ ಭಾನುವಾರ ಮೆಟ್ರೊ ಹಳಿ ಮೇಲೆ ಬಿದ್ದಿದ್ದು, ಜಸೋಲಾ ವಿಹಾರ–ಶಾಹೀನ ಭಾಗದಿಂದ ಬಾಟನಿಕಲ್‌ ಗಾರ್ಡನ್‌ ನಡುವಣ ಮ್ಯಾಗ್ನೆಟ ಲೈನ್‌ ಮೆಟ್ರೊ ಸೇವೆ ಅರ್ಧ ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.

ಜಸೋಲಾ ವಿಹಾರ್‌ ಬಳಿ ಮೆಟ್ರೊ ಹಳಿ ಮೇಲೆ ಡ್ರೋನ್‌ ಬಿದ್ದಿದೆ. ಇದರಿಂದ ಮಾರ್ಗ ಮಧ್ಯದಲ್ಲಿ ಮೆಟ್ರೊ ರೈಲುಗಳನ್ನು ನಿಲ್ಲಿಸಲಾಗಿದ್ದು ಪ್ರಯಾಣಿಕರು ಗಲಿಬಿಲಿಗೊಂಡರು ಎಂದು ಮೂಲಗಳು ಹೇಳಿವೆ.

ದೆಹಲಿ ಪೊಲೀಸ್‌, ಸಿಐಎಸ್‌ಎಫ್‌ ಮತ್ತು ದೆಹಲಿ ಮೆಟ್ರೊ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಡ್ರೋನ್‌ ಅನ್ನು ಸುರಕ್ಷಿತವಾಗಿ ಮೆಟ್ರೊ ಮಾರ್ಗದಿಂದ ಹೊರ ತೆಗೆದಿವೆ.

ಕಾರ್ಯಾಚರಣೆಯ ಸಮಯದಲ್ಲಿ, ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಲು ಅಥವಾ ಅಲ್ಲಿಂದ ಹೊರಬರಲು ಯಾರಿಗೂ ಅವಕಾಶ ನೀಡದ ಕಾರಣ ಪ್ರಯಾಣಿಕರು ಕೆಲ ಕಾಲ ತೊಂದರೆಪಡುವಂತಾಯಿತು.

ಅರ್ಧ ಗಂಟೆ ಬಳಿಕ ಮೆಟ್ರೊ ಎಂದಿನಂತೆ ಕಾರ್ಯನಿರ್ವಹಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಡ್ರೋನ್‌ ವಶಕ್ಕೆ ಪಡೆದ ಪೊಲೀಸರು ತನಿಖೆ ಬಳಿಕ ಮಾಲೀಕರಿಗೆ ಹಿಂದಿರುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT