ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಪಾಲ್ಘರ್‌ನಲ್ಲಿ ಕೋವಿಡ್ ಲಸಿಕೆ ಹೊತ್ತು ತರುತ್ತಿದೆ ಡ್ರೋನ್...

Last Updated 18 ಡಿಸೆಂಬರ್ 2021, 11:12 IST
ಅಕ್ಷರ ಗಾತ್ರ

ಮುಂಬೈ: ದೂರದ ಪ್ರದೇಶಗಳಿಗೆ ಡ್ರೋನ್ ಮೂಲಕ ಕೋವಿಡ್–19 ಲಸಿಕೆಯನ್ನು ತಲುಪಿಸುವ ಯೋಜನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಆರಂಭಗೊಂಡಿದೆ.

ಪಾಲ್ಘರ್‌ನ ಜವಾಹರ್‌ನಲ್ಲಿ ದೂರದ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ಕಳುಹಿಸಿಕೊಡುವ ಡ್ರೋನ್ ಸೇವೆಗೆ ಡಿಸೆಂಬರ್ 16ರಂದು ಚಾಲನೆ ನೀಡಲಾಗಿದೆ. ಇದರಿಂದಾಗಿ ಒಂದು ಗಂಟೆ ಸಮಯದಲ್ಲಿ ಲಸಿಕೆಗಳನ್ನು ತಲುಪಿಸುತ್ತಿದ್ದ ಪ್ರದೇಶಗಳಿಗೆ ಕೇವಲ 10 ನಿಮಿಷಗಳಲ್ಲಿ ಕಳುಹಿಸಿಕೊಡುವುದು ಸಾಧ್ಯವಾಗುತ್ತಿದೆ ಎಂದು ‘ಎಎನ್‌ಐ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಮಹಾರಾಷ್ಟ್ರದ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಪ್ರದೀಪ್ ವ್ಯಾಸ್ ಡ್ರೋನ್ ಮೂಲಕ ಲಸಿಕೆ ಕಳುಹಿಸಿಕೊಡುವ ಸೇವೆಗೆ ಚಾಲನೆ ನೀಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT