ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಗಿನ ಮೂಲಕ ಲಸಿಕೆಯ 3ನೇ ಹಂತದ ಅಧ್ಯಯನ: ಅನುಮತಿ ಕೋರಿದ ಭಾರತ್‌ ಬಯೋಟೆಕ್

5–18 ವರ್ಷದವರಿಗೆ ಮೂಗಿನ ಮೂಲಕ ನೀಡುವ ಕೋವಿಡ್‌ ಲಸಿಕೆ
Last Updated 11 ಸೆಪ್ಟೆಂಬರ್ 2022, 10:38 IST
ಅಕ್ಷರ ಗಾತ್ರ

ನವದೆಹಲಿ: ಮೂಗಿನ ಮೂಲಕ ನೀಡಬಹುದಾದ ಕೋವಿಡ್‌ ಲಸಿಕೆಯನ್ನು 5 ರಿಂದ 18 ವರ್ಷ ವಯೋಮಾನದವರಿಗೆ ನೀಡುವುದಕ್ಕೆ ಸಂಬಂಧಿಸಿ ಮೂರನೇ ಹಂತದ ಅಧ್ಯಯನ ಕೈಗೊಳ್ಳಲು ಹೈದರಾಬಾದ್‌ ಮೂಲದ ಭಾರತ್ ಬಯೋಟೆಕ್ ಅನುಮತಿ ಕೇಳಿದೆ.

‘5 ರಿಂದ 18 ವರ್ಷ ವಯೋಮಾನದವರಿಗೆ ಮೂಗಿನ ಮೂಲಕ ನೀಡಬಹುದಾದ ಕೋವಿಡ್‌ ಲಸಿಕೆಯು (ಬಿಬಿವಿ154) ಎಷ್ಟರ ಮಟ್ಟಿಗೆ ಸುರಕ್ಷಿತ, ಅದರ ಪ್ರತಿಕ್ರಿಯಾತ್ಮಕತೆ ಏನು ಹಾಗೂ ಲಸಿಕೆಯಿಂದ ಸಿಗುವ ರೋಗನಿರೋಧಕ ಶಕ್ತಿ ಎಷ್ಟು ಎಂಬುದು ಸೇರಿದಂತೆ ವಿವಿಧ ವಿಷಯಗಳ ಮೌಲ್ಯಮಾಪನ ನಡೆಸಲು ಅನುಮತಿ ನೀಡಬೇಕು’ ಎಂದು ಕಂಪನಿಯು ಭಾರತೀಯ ಔಷಧ ಮಹಾನಿಯಂತ್ರಕರಿಗೆ (ಡಿಸಿಜಿಐ) ಅರ್ಜಿ ಸಲ್ಲಿಸಿದೆ.

‘ಈ ಲಸಿಕೆಯು ಶ್ವಾಸನಾಳದ ಮೇಲ್ಭಾಗದಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸುತ್ತದೆ. ಕೊರೊನಾ ವೈರಸ್‌ನಿಂದಾಗುವ ಸೋಂಕು ಶ್ವಾಸನಾಳ ಹಾಗೂ ಶ್ವಾಸಕೋಶಕ್ಕೆ ಪಸರಿಸುವುದನ್ನುಈ ಪ್ರತಿಕಾಯಗಳು ತಡೆಯುತ್ತವೆ. ಆದರೂ, ಈ ಲಸಿಕೆಯ ಪರಿಣಾಮದ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯ ಇದೆ’ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT