ಬುಧವಾರ, ಮಾರ್ಚ್ 29, 2023
25 °C

ಕುಡಿದ ಅಮಲಿನಲ್ಲಿ ಹೆತ್ತ ತಾಯಿಗೆ ಥಳಿಸುತ್ತಿದ್ದ ಮಗನ ಬಂಧನ

ಐಎಎನ್‌ಎಸ್‌ Updated:

ಅಕ್ಷರ ಗಾತ್ರ : | |

ತಿರುವನಂತಪುರಂ: ಕುಡಿದ ಅಮಲಿನಲ್ಲಿ ತನ್ನ ತಾಯಿಗೆ ಥಳಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗುರುವಾರ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಕೊಟ್ಟಾಯಂನ ಮೀನಾಡೋಮ್‌ನಲ್ಲಿ ಈ ಘಟನೆ ನಡೆದಿದ್ದು, ಕೊಚುಮೊನ್ (48) ಬಂಧಿತ.  ಕುಡಿದು ಬಂದು ಮನೆಯಲ್ಲಿ ತಾಯಿಗೆ ಥಳಿಸುತ್ತಿದ್ದ ದೃಶ್ಯವನ್ನು ಆತನ ಪತ್ನಿಯೇ ವಿಡಿಯೊ ಮಾಡಿದ್ದು, ಇದೀಗ ಆ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ.

ಕೊಚುಮೊನ್ ಕುಡಿದ ಅಮಲಿನಲ್ಲಿ ತನ್ನ ತಾಯಿಗೆ ಥಳಿಸಲು ಪ್ರಾರಂಭಿಸಿದ್ದಾನೆ. ಇದನ್ನು ನೋಡಲಾಗದ ಆತನ ಪತ್ನಿಯೇ ಈ ದೃಶ್ಯ ಸೆರೆ ಹಿಡಿದು ಸ್ಥಳೀಯ ಗ್ರಾಮ ಪಂಚಾಯ್ತಿ ಸದಸ್ಯರಿಗೆ ವಿಡಿಯೊವನ್ನು ಕಳುಹಿಸಿದ್ದಾರೆ. ತಕ್ಷಣ ಆ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಬಾರ್‌ನಲ್ಲಿ ಮದ್ಯಪಾನ ಮಾಡುತ್ತಿದ್ದ ಕೊಚುಮೊನ್‌ನನ್ನು ಬಂಧಿಸಲಾಗಿದೆ.

ವಯಸ್ಸಾದ ತಾಯಿಯ ಮೇಲೆ ಕೈ ಎತ್ತದಂತೆ ನೆರೆಹೊರೆಯವರು ಹಲವು ಸಲ ಆತನಿಗೆ ಎಚ್ಚರಿಕೆ ನೀಡಿದ್ದರು. ಗಂಡನ ವರ್ತನೆ ಸಹಿಸದ ಪತ್ನಿ ಕೊನೆಗೆ ಪತಿಗೆ ತಕ್ಕ ಪಾಠ ಕಲಿಸುವ ನಿರ್ಧಾರಕ್ಕೆ ಬಂದಿದ್ದು, ಸದ್ಯ ಕೊಚುಮೊನ್‌ ಜೈಲುವಾಸಿಯಾಗಿದ್ದಾನೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು