ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ.ಬಂಗಾಳದಲ್ಲಿ ಗೆದ್ದರೆ ಗುಜರಾತ್‌ನಲ್ಲೂ ಚುನಾವಣೆ ಘೋಷಣೆ -ಸಚಿವ ರಮಣ್‌ ಪಟ್ಕರ್‌

Last Updated 7 ಮಾರ್ಚ್ 2021, 15:32 IST
ಅಕ್ಷರ ಗಾತ್ರ

ವಲ್ಸಾಡ್‌: ಪಶ್ಚಿಮ ಬಂಗಾಳ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಪಕ್ಷವು ಗೆದ್ದರೆ, ಗುಜರಾತ್‌ ವಿಧಾನಸಭೆಗೆ ಅವಧಿಗೂ ಮುನ್ನವೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಗುಜರಾತ್‌ನ ಅರಣ್ಯ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ರಮಣ್‌ ಪಟ್ಕರ್‌ ಭಾನುವಾರ ಹೇಳಿದರು.

ಪಶ್ಚಿಮ ಬಂಗಾಳ ವಿಧಾನಸಭೆಗೆ ಮಾರ್ಚ್‌ 27ರಿಂದ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಗುಜರಾತ್‌ ವಿಧಾನಸಭೆ ಅವಧಿ ಮುಂದಿನ ಡಿಸೆಂಬರ್‌ ವರೆಗೆ ಇದೆ.

ವಲ್ಸಾಡ್‌ ಜಿಲ್ಲೆಯ ಉಮರ್‌ಗ್ರಾಮನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಎಲ್ಲ ಚುನಾವಣೆಗಳಲ್ಲಿಯೂ ಗೆಲುವಿನ ಓಟ ಮುಂದುವರಿಸಿದೆ. ಹೀಗಾಗಿ ಗುಜರಾತ್‌ನಲ್ಲಿ ಸಹ ಚುನಾವಣೆ ನಡೆಸಲು ಅನುಕೂಲಕರ ವಾತಾವರಣ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT