ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ–ಮ್ಯಾನ್ಮಾರ್‌ ಗಡಿಯಲ್ಲಿ 6.1 ತೀವ್ರತೆ ಭೂಕಂಪ: ಕೋಲ್ಕತ್ತ ವರೆಗೆ ಕಂಪನ ಅನುಭವ

Last Updated 26 ನವೆಂಬರ್ 2021, 2:49 IST
ಅಕ್ಷರ ಗಾತ್ರ

ನವದೆಹಲಿ: ಶುಕ್ರವಾರ ಮುಂಜಾನೆ 5.30ರ ಸಮಯದಲ್ಲಿ ಮ್ಯಾನ್ಮಾರ್-ಭಾರತದ ಗಡಿ ಪ್ರದೇಶದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

ಭಾರತದ ಐಜ್ವಾಲ್‌ನಿಂದ 140 ಕಿ. ಮೀ. ದೂರದ ಪ್ರದೇಶದ 12 ಕಿ. ಮೀ. ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ಭಾರತದ ಭೂಕಂಪ ಮಾಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಬಾಂಗ್ಲಾದೇಶದ ಚಿತ್ತಗಾಂಗ್‌ನಿಂದ ಪೂರ್ವ ಭಾರತದ ಕೋಲ್ಕತ್ತದವರೆಗೆ ಭೂಕಂಪನದ ಅನುಭವವಾಗಿದೆ ಎಂದು ‘ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್‌’ನ ವೆಬ್‌ಸೈಟ್‌ನಲ್ಲಿ ಬರೆಯಲಾಗಿದೆ. ಅಲ್ಲದೇ ಹಲವು ಟ್ವಿಟರ್‌ ಬಳಕೆದಾರರು ತಮಗೆ ಭೂಕಂಪನದ ಅನುಭವವಾಗಿದ್ದಾಗಿಯೂ ಪೋಸ್ಟ್‌ ಹಾಕಿದ್ದಾರೆ.

ಈಶಾನ್ಯ ಭಾರತದ ರಾಜ್ಯಗಳು ಮತ್ತು ಬಾಂಗ್ಲಾದೇಶದ ಪ್ರಮುಖ ನಗರಗಳಲ್ಲಿ ಕಂಪನಗಳು ಸಂಭವಿಸಿವೆ ಎಂದು ಭೂಕಂಪ ಮಾಪನ ಶಾಸ್ತ್ರ ವಿಭಾಗವೂ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT