ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಮಾತುಕತೆ: ಮಹತ್ವದ ಸಮಸ್ಯೆಗಳ ಇತ್ಯರ್ಥಕ್ಕೆ ಮೂಡದ ಒಮ್ಮತ

Last Updated 18 ಜುಲೈ 2022, 18:19 IST
ಅಕ್ಷರ ಗಾತ್ರ

ನವದೆಹಲಿ:ಪೂರ್ವ ಲಡಾಖ್‌ನಲ್ಲಿ ಉದ್ಭವಿಸಿರುವ ಗಡಿ ಬಿಕ್ಕಟ್ಟು ಶಮನ ಸಂಬಂಧ ಭಾರತ ಮತ್ತು ಚೀನಾ ನಡುವೆಸೇನಾಹಂತದಲ್ಲಿ ನಡೆದ 16ನೇ ಸುತ್ತಿನ ಮಾತುಕತೆಯಲ್ಲಿಮಹತ್ವದ ಸಮಸ್ಯೆಗಳ ಇತ್ಯರ್ಥಕ್ಕೆ ಒಮ್ಮತ ಮೂಡಿಲ್ಲ.

‘ಪರಸ್ಪರ ಒಪ್ಪಿದ ನಿರ್ಣಯ ಕೈಗೊಳ್ಳಲು ಹಾಗೂ ಆದಷ್ಟು ಶೀಘ್ರ ಪರಿಹಾರ ಕಂಡುಕೊಳ್ಳುವ ಹಾದಿಯಲ್ಲಿ ನಿಕಟ ಬಾಂಧವ್ಯ ಹೊಂದಲು ಉಭಯ ದೇಶಗಳು ಸಮ್ಮತಿಸಿವೆ’ ಎಂದು ಜಂಟಿ ಪ್ರಕಟಣೆ ತಿಳಿಸಿದೆ.

‘ಉಭಯ ದೇಶಗಳ ಸೇನಾ ಅಧಿಕಾರಿಗಳ ನಡುವೆ ಭಾನುವಾರ ಸುಮಾರು 12 ಗಂಟೆಗಳ ಸುದೀರ್ಘ ಮಾತುಕತೆ ನಡೆದಿತ್ತು. ಈ ವೇಳೆ ಕೆಲ ವಿಚಾರಗಳ ಬಗ್ಗೆ ಒಮ್ಮತದ ನಿರ್ಧಾರ ಕೈಗೊಳ್ಳಬಹುದು ಎಂದು ಊಹಿಸಲಾಗಿತ್ತು. ಆ ನಿರೀಕ್ಷೆ ತಲೆಕೆಳಗಾಗಿದೆ’ ಎಂದು ಸೇನಾ ಮೂಲಗಳು ತಿಳಿಸಿವೆ.

ಎಂಎಸ್‌ಪಿ ಜಾರಿ ಸಂಬಂಧ ಸಮಿತಿ

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಜಾರಿ ಸಂಬಂಧ ಕೇಂದ್ರ ಸರ್ಕಾರವು ಸೋಮವಾರ ಸಮಿತಿಯೊಂದನ್ನು ರಚಿಸಿದೆ.

ಕೇಂದ್ರ ಕೃಷಿ ಸಚಿವಾಲಯದ ಮಾಜಿ ಕಾರ್ಯದರ್ಶಿ ಸಂಜಯ್‌ ಅಗರವಾಲ್‌ ನೇತೃತ್ವದ ಸಮಿತಿಯಲ್ಲಿ ಸಂಯುಕ್ತ ಕಿಶಾನ್‌ ಮೋರ್ಚಾದ ಮೂವರು ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ.

ನೀತಿ ಆಯೋಗದ ಸದಸ್ಯ ರಮೇಶ್‌ ಚಾಂದ್‌, ಕೃಷಿ ವಿಜ್ಞಾನಿ ಸಿಎಸ್‌ಸಿ ಶೇಖರ್‌, ಐಐಎಂ–ಅಹಮದಾಬಾದ್‌ನ ಸುಖ್‌ಪಾಲ್‌ ಸಿಂಗ್‌, ಸಿಎಸಿಪಿ ಸದಸ್ಯ ನವೀನ್‌ ಪಿ.ಸಿಂಗ್‌, ರಾಷ್ಟ್ರ ಪ್ರಶಸ್ತಿ ವಿಜೇತ ಕೃಷಿಕ ಭರತ್‌ ಭೂಷಣ್‌ ತ್ಯಾಗಿ ಹಾಗೂ ಇತರ ರೈತ ಸಂಘಟನೆಗಳಿಗೆ ಸೇರಿದ ಐವರು ಸದಸ್ಯರನ್ನೂ ಸಮಿತಿ ಒಳಗೊಂಡಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT