ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯಮೂರ್ತಿಗಳು ಶಿಸ್ತು ಪಾಲಿಸಲೇಬೇಕು: ಸಿಜೆಐ ಡಿ.ವೈ. ಚಂದ್ರಚೂಡ್‌

judges follow discipline
Last Updated 22 ಫೆಬ್ರುವರಿ 2023, 15:51 IST
ಅಕ್ಷರ ಗಾತ್ರ

ನವದೆಹಲಿ: ‘ಕೋರ್ಟ್‌ ರಿಜಿಸ್ಟ್ರಿ ವಿರುದ್ಧ ಬೇಜವಾಬ್ದಾರಿಯುತವಾಗಿ ಆರೋಪ ಮಾಡುವುದು ಸುಲಭ. ಈ ಭೂಮಿ ಮೇಲೆ ಯಾರನ್ನೂ ಬೇಕಾದರೂ ಟೀಕಿಸಲು ನಿಮಗೆ ಸ್ವಾತಂತ್ರ್ಯವಿದೆ. ಆದರೆ, ಪ್ರಕರಣಗಳ ವಿಚಾರಣೆ ಪಟ್ಟಿಯಲ್ಲಿ ನಾವು ಶಿಸ್ತು ಪಾಲಿಸಲೇಬೇಕಾಗುತ್ತದೆ’ ಎಂದು ಸುಪ್ರೀಂ ಕೋರ್ಟ್, ಬುಧವಾರ ವಕೀಲರಿಗೆ ಖಡಕ್ಕಾಗಿ ಹೇಳಿದೆ.

ತಮಿಳುನಾಡಿನ ‘ಉದ್ಯೋಗಕ್ಕಾಗಿ ಲಂಚ’ ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಪಟ್ಟಿ ವಿಷಯದಲ್ಲಿ ವಕೀಲರು ಎತ್ತಿದ ಪ್ರಶ್ನೆಗೆ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠವು ಈ ರೀತಿ ಹೇಳಿದೆ.

ನಿಯಮಗಳ ಉಲ್ಲಂಘನೆಯಿಂದಾಗಿ ಪ್ರಕರಣವನ್ನು ಮತ್ತೊಂದು ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡಿರುವ ನ್ಯಾಯಾಲಯದ ರಿಜಿಸ್ಟ್ರಿಯ ಕ್ರಮವನ್ನು ಹಿರಿಯ ವಕೀಲರು ಪ್ರಶ್ನಿಸಿದಾಗ, ಮುಖ್ಯನ್ಯಾಯಮೂರ್ತಿಗಳು ರಿಜಿಸ್ಟ್ರಿ ನಿಯಮ ಸಮರ್ಥಿಸಿಕೊಂಡರು.

ವಕೀಲ ಪ್ರಶಾಂತ್‌ ಭೂಷಣ್‌ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ( ಈಗ ನಿವೃತ್ತ) ಮತ್ತು ವಿ. ರಾಮಸುಬ್ರಮಣಿಯನ್‌ ಅವರಿದ್ದ ಪೀಠವು, ಮದ್ರಾಸ್ ಹೈಕೋರ್ಟ್ ತೀರ್ಪು ವಜಾಗೊಳಿಸಿ, ಡಿಎಂಕೆ ಶಾಸಕ ವಿ. ಸೆಂಥಿಲ್ ಬಾಲಜಿ ವಿರುದ್ಧದ ಕ್ರಿಮಿನಲ್ ಆರೋಪಗಳನ್ನು ಮರುಸ್ಥಾಪಿಸಿದ್ದಾರೆ ಎಂದು ವಾದಿಸಿದರು.

ಉಳಿದ ಪ್ರಕರಣಗಳಲ್ಲಿ ಹೈಕೋರ್ಟ್‌ ನೀಡಿರುವ ತಡೆಯಾಜ್ಞೆ ಆದೇಶಗಳ ತೆರವಿಗೆ ಪೊಲೀಸರು ಮುಂದಾಗಬೇಕು ಎಂದು ಪೀಠವು ನಿರ್ದೇಶನವನ್ನೂ ನೀಡಿತ್ತು. ಅದನ್ನು ಮಾಡುವ ಬದಲು, ಆರೋಪಿಗಳಿಗೆ ನೆರವಾಗಲು ಪೊಲೀಸರು ಡಿ–ನೊವಾ (ಮೊದಲಿನಿಂದ ತನಿಖೆ ನಡೆಸುವುದು) ತನಿಖೆಗೆ ಹೈಕೋರ್ಟ್‌ ಮುಂದೆ ಒಪ್ಪಿಕೊಂಡರು. ಇದಕ್ಕೆ ಕೋರ್ಟ್‌ ಅನುಮತಿಸಿತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದರು.

ಆಗ, ಹಿರಿಯ ವಕೀಲರಾದ ದುಶ್ಯಂತ್‌ ದವೆ ಮತ್ತು ಕಪಿಲ್ ಸಿಬಲ್ ಅವರು ಪ್ರಕರಣದ ವಿಚಾರಣೆಯ ಪಟ್ಟಿ ಬಗ್ಗೆ ಪೀಠಕ್ಕೆ ದೂರು ನೀಡಿದರು. ಪ್ರಕರಣಕ್ಕೆ ಸಂಬಂಧಿಸಿದ ಒಂದು ಅರ್ಜಿ ಪೀಠದಲ್ಲಿ ವಿಚಾರಣೆಯಲ್ಲಿರುವಾಗ, ಇದಕ್ಕೆ ಸಂಬಂಧಿಸಿದ ಇನ್ನೊಂದು ಅರ್ಜಿಯನ್ನು ಬೇರೆ ಪೀಠಕ್ಕೆ ಪಟ್ಟಿ ಮಾಡಿರುವುದನ್ನು ಆಕ್ಷೇಪಿಸಿದರು.

ಒಂದು ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಗಳು ಒಂದು ನ್ಯಾಯಾಲಯಕ್ಕೆ ಬಂದಾಗ ಅವು ನಿರ್ದಿಷ್ಟವಾದ ಒಂದೇ ಪೀಠದಲ್ಲಿ ವಿಚಾರಣೆಗೆ ರಿಜಿಸ್ಟ್ರಿ ಪಟ್ಟಿ ಮಾಡಬೇಕೆಂಬ ಕಡ್ಡಾಯ ನಿಯಮವಿದೆ. ಆದರೆ, ಇಲ್ಲಿ ಒಂದೇ ಪ್ರಕರಣ ಮತ್ತೊಂದು ಪೀಠದಲ್ಲಿ ನಡೆಯುತ್ತಿದೆ. ರಿಜಿಸ್ಟ್ರಿ ನಿಯಮವನ್ನು ತಪ್ಪದೇ ಪಾಲಿಸುವುದು ಕಡ್ಡಾಯ ಎಂದು ದವೆ ಒತ್ತಿಹೇಳಿದರು.

ಆಗ, ಮುಖ್ಯನ್ಯಾಯಮೂರ್ತಿ ‘ನನ್ನ ಬಳಿ ಈಗ ಅದರ ದಾಖಲೆಗಳಿಲ್ಲ, ನಂತರ ಈ ಬಗ್ಗೆ ಪರಿಶೀಲಿಸೋಣ’ ಎಂದರು.

‘ನ್ಯಾಯಮೂರ್ತಿಗಳಾಗಿ ನಾವು ಈ ನ್ಯಾಯಾಲಯದ ಕೆಲವು ಶಿಸ್ತುಗಳನ್ನು ಪಾಲಿಸಬೇಕು. ನಾನು ಅದನ್ನು ಪಾಲಿಸುತ್ತಿದ್ದೇನೆ ಮತ್ತು ಪೀಠಕ್ಕೆ ವಹಿಸುತ್ತೇನೆ’ ಎಂದರು.

‘ನ್ಯಾಯಾಂಗಕ್ಕೆ ಅತ್ಯಂತ ಗೌರವ ನೀಡುತ್ತೇನೆ. ನ್ಯಾಯಮೂರ್ತಿಗಳ ಮಗನೆಂದ ಮೇಲೆ, ನನ್ನ ಟೀಕೆಗಳು ವ್ಯಕ್ತಿನಿಷ್ಠವಾಗಿರದೇ ವಸ್ತುನಿಷ್ಠವಾಗಿರಬೇಕು. ದವೆ ಅವರೇ ನಿಮ್ಮ ಟೀಕೆ ವಸ್ತುನಿಷ್ಠವಾಗಿದೆ ಎಂಬ ನಿಮ್ಮ ನಿಲುವು ವ್ಯಕ್ತಿನಿಷ್ಠವಾಗಿರಬಹುದು’ ಎಂದು ಹೇಳಿದರು.

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಈ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿಗಳು ತೆಗೆದುಕೊಳ್ಳುವ ನಿರ್ಧಾರವನ್ನು ನಾವು ಸ್ವೀಕರಿಸುತ್ತೇವೆ. ತಾವು ಸೂಚಿಸುವ ಪೀಠದ ಮುಂದೆ ವಿಚಾರಣೆಗೆ ಸಮ್ಮತಿಸುತ್ತೇವೆ’ ಎಂದು ಹೇಳಿದರು.

You may criticise anybody under the Sun, but we have to go by rules,' SC to lawyers on complaints of listing


NEW DELHI: The Supreme Court on Wednesday told the advocates that they had liberty to criticise anybody under the Sun but it had to go by the rules so far as listing of the cases was concerned.

The matter pertained to the cases connected with the cash-for-jobs scam in Tamil Nadu.

A bench led by Chief Justice of India D Y Chandrachud defended the court's registry after it was pointed out that the matter was listed before another bench, in violation of rules.

Advocate Prashant Bhushan contended that in September last year, a bench of Justices S Abdul Nazeer (since retired) and V Ramasubramanian had restored the criminal charges against DMK MLA V Senthil Balaji, setting aside the Madras High Court judgment.

He said that the court further directed that in the remaining similar cases, the police should move for vacating the stay order granted by the high court.

Instead of doing that, the police agreed before the high court for a de-novo investigation, in a relief to the accused, and it was allowed, and petitions have been filed in the apex court challenging it.

At this, senior advocates Dushyant Dave and Kapil Sibal complained regarding the listing of the case and objected to the registry putting one case before another bench, when the connected matters are being heard by a different bench.

Dave said the registry has strict rules that any matter which arises from the same judgment must come to the same court, but these matters are being heard by some other court.

"Let me look at it in the evening. I don't have the papers with me", the CJI told Dave who pressed that the registry must follow the rules.‌

On this, the Chief Justice replied “you have the liberty to criticise everybody under the Sun. We as judges of this court have to follow some discipline. And I am following it by looking into the matter and will assign a bench”.

Clarifying that he has utmost respect for the judiciary and “I myself am a judge's son. My criticism is objective, not subjective”.

The Chief Justice said, “Mr Dave, your assessment that your criticism is objective may itself be subjective". ,

Solicitor General Tushar Mehta submitted that it is the prerogative of the master of the roster to assign a bench and added, "whatever your lordships decide, we have to accept".

Senior advocate Gopal Sankaranarayanan, along with advocate Balaji Srinivasan, for the victims of the scam submitted that the matter should have gone before the bench of Justice Ramasubramanian, since it arises from his judgment, but it went before Justice Krishan Murari’s bench. They also said the accused cannot seek hearing before a particular bench.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT