ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ: ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ

Last Updated 31 ಮಾರ್ಚ್ 2021, 6:04 IST
ಅಕ್ಷರ ಗಾತ್ರ

ನವದೆಹಲಿ: ವಿಶೇಷ ವೀಕ್ಷಕರು ನೀಡಿದ ಮಾಹಿತಿ ಆಧರಿಸಿ ಪಶ್ಚಿಮ ಬಂಗಾಳದ ಹಲ್ದಿಯಾದ ಉಪ ವಲಯ ಪೊಲೀಸ್ ಅಧಿಕಾರಿ ಮತ್ತು ಪುರ್ಬಾ ಮೇದಿನಿಪುರ ಜಿಲ್ಲೆಯ ಮಹಿಷಾದಲ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಅವರನ್ನು ಚುನಾವಣೇತರ ಕಾರ್ಯಗಳಿಗೆ ವರ್ಗಾವಣೆ ಮಾಡಲು ಚುನಾವಣಾ ಆಯೋಗ ಆದೇಶಿಸಿದೆ.

ಈ ಕುರಿತು ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಮತ್ತು ಮುಖ್ಯ ಚುನಾವಣಾ ಅಧಿಕಾರಿಗೆ ಮಂಗಳವಾರ ಪ್ರತ್ಯೇಕ ಪತ್ರಗಳನ್ನು ಬರೆದಿದ್ದು, ವರ್ಗಾವಣೆ ಮಾಡುವ ಹಲ್ದಿಯಾ ಪೊಲೀಸ್ ಅಧಿಕಾರಿ ಬರೌನ್ ಬೈದ್ಯ ಅವರ ಸ್ಥಾನಕ್ಕೆ ಉತ್ತಮ್‌ ಮಿತ್ರ ಅವರನ್ನು ಹಾಗೂ ಮಹಿಷಾದಲ್‌ನ ಸರ್ಕಲ್ ಇನ್ಸ್‌ಪೆಕ್ಟರ್ ಬಿಚಿತಾ ಬಿಕಾಸ್ ರಾಯ್ ಅವರ ಜಾಗಕ್ಕೆ ಜಲ್ಪೈಗುರಿ ಸರ್ಕೀಟ್‌ ಬೆಂಚ್‌ನ ಇನ್ಸ್‌ಪೆಕ್ಟರ್ ಸಿರ್ಶೇಂದು ದಾಸ್ ಅವರನ್ನು ನಿಯೋಜಿಸುವಂತೆ ಸೂಚಿಸಿದೆ.

ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಚುನಾವಣೆಗೆ ಮೊದಲ ಹಂತದ ಮತದಾನ ಮಾರ್ಚ್ 27 ರಂದು ನಡೆದಿದೆ. ಎರಡನೇ ಹಂತ ಏಪ್ರಿಲ್ 1 ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT