ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರಿಗೆ ಡಿಜಿಟಲ್‌ ಗುರುತಿನ ಚೀಟಿ: ಚುನಾವಣಾ ಆಯೋಗದ ಚಿಂತನೆ

Last Updated 12 ಡಿಸೆಂಬರ್ 2020, 6:59 IST
ಅಕ್ಷರ ಗಾತ್ರ

ನವದೆಹಲಿ: ಮತದಾರರಿಗೆ ಇನ್ನು ಮುಂದೆ ಡಿಜಿಟಲ್‌ ರೂಪದಲ್ಲಿ ಭಾವಚಿತ್ರವುಳ್ಳ ಚುನಾವಣಾ ಗುರುತಿನ ಚೀಟಿ ನೀಡಲು ಚುನಾವಣಾ ಆಯೋಗ ಚಿಂತನೆ ನಡೆಸಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

‘ಡಿಜಿಟಲ್‌ ಗುರುತಿನ ಚೀಟಿ ಬಗ್ಗೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳು, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಸಲಹೆಗಳು ಬಂದಿವೆ. ಇದನ್ನು ಯಾವ ರೀತಿ ಜಾರಿಗೊಳಿಸುವ ಎನ್ನುವ ಬಗ್ಗೆ ಸಮಾಲೋಚನೆಗಳು ನಡೆಯುತ್ತಿವೆ’ ಎಂದು ತಿಳಿಸಿದ್ದಾರೆ.

‘ಡಿಜಿಟಲ್‌ ಗುರುತಿನ ಚೀಟಿ ಮೊಬೈಲ್‌, ವೆಬ್‌ಸೈಟ್‌, ಇ–ಮೇಲ್‌ನಲ್ಲಿ ದೊರೆಯಬಹುದು. ಸುಲಭವಾಗಿ ಮತ್ತು ತ್ವರಿತವಾಗಿ ಗುರುತಿನ ಚೀಟಿ ಲಭ್ಯವಾಗಬೇಕು ಎನ್ನುವುದು ಆಯೋಗದ ಪ್ರಮುಖ ಉದ್ದೇಶ. ಡಿಜಿಟಲ್‌ ರೂಪದಲ್ಲಿ ಮತದಾರರ ಭಾವಚಿತ್ರವೂ ಸ್ಪಷ್ಟವಾಗಿರುತ್ತದೆ. ಇದರಿಂದ ಮತದಾರರನ್ನು ಸುಲಭವಾಗಿ ಗುರುತಿಸಬಹುದು’ ಎಂದು ತಿಳಿಸಿದ್ದಾರೆ.

‘ತಂತ್ರಜ್ಞಾನವು ದುರುಪಯೋಗವಾಗದಂತೆ ಎಚ್ಚರ ವಹಿಸಬೇಕಾಗಿದೆ. ಹೀಗಾಗಿ, ಗುರುತಿನ ಚೀಟಿಯೂ ಸುರಕ್ಷಿತವಾಗಿರಬೇಕು ಎನ್ನುವ ಬಗ್ಗೆ ಹಲವು ರೀತಿಯ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

1993ರಲ್ಲಿ ಮೊದಲ ಬಾರಿ ಆಯೋಗವು ಗುರುತಿನ ಚೀಟಿ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT