ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡೋಲಿ ಜೈಲಿಗೆ ಚಂದ್ರಶೇಖರ್ ದಂಪತಿ ಸ್ಥಳಾಂತರ: ಆಕ್ಷೇಪ

ಇ.ಡಿ
Last Updated 23 ಜೂನ್ 2022, 13:58 IST
ಅಕ್ಷರ ಗಾತ್ರ

ನವದೆಹಲಿ: ವಂಚಕ, ಬೆಂಗಳೂರಿನ ಸುಕೇಶ್ ಚಂದ್ರಶೇಖರ್ ಮತ್ತು ಆತನ ಪತ್ನಿಯನ್ನು ತಿಹಾರ್ ಜೈಲಿನಿಂದ ಪೂರ್ವ ದೆಹಲಿಯ ಮಂಡೋಲಿ ಜೈಲಿಗೆ ಸ್ಥಳಾಂತರಿಸಬಹುದು ಎಂದು ಜಾರಿ ನಿರ್ದೇಶನಾಲಯ (ಇ.ಡಿ)ವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಸುಕೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆರ್.ಬಸಂತ್, ತಮ್ಮ ಕಕ್ಷಿದಾರರ ವಿರುದ್ಧ ಹೆಚ್ಚಿನ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿರುವುದರಿಂದ ಅಲ್ಲಿರುವ ಜೈಲಿಗೆ ಅಥವಾ ದೆಹಲಿಯ ಹೊರಗಿನ ಜೈಲಿಗೆ ಸ್ಥಳಾಂತರಿಸಬೇಕು ಎಂದು ನ್ಯಾಯಮೂರ್ತಿಗಳಾದ ಸಿ. ಟಿ. ರವಿಕುಮಾರ್ ಮತ್ತು ಸುಧಾಂಶು ಧುಲಿಯಾ ಅವರ ರಜಾಕಾಲದ ಪೀಠಕ್ಕೆ ಮನವಿ ಸಲ್ಲಿಸಿದರು.

ತನ್ನ ಕಕ್ಷಿದಾರನನ್ನು ಮಂಡೋಲಿ ಜೈಲಿಗೆ ವರ್ಗಾಯಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಸಂತ್, ಜೈಲು ದೆಹಲಿಯ ಹೊರಗಿರಬೇಕು ಹಾಗೂ ಅವರನ್ನು ಗಾಜಿಯಾಬಾದ್ ಜೈಲಿನಲ್ಲಿ ಇರಿಸಬಹುದು. ಆದರೆ, ದೆಹಲಿ ಆಡಳಿತದಲ್ಲಿರುವ ಯಾವುದೇ ಜೈಲಿನಲ್ಲಿರಿಸಬಾರದು ಎಂದು ಹೇಳಿದರು.

ತನ್ನ ಕಕ್ಷಿದಾರನನ್ನು ದೆಹಲಿಯ ಮತ್ತೊಂದು ಜೈಲಿಗೆ ವರ್ಗಾಯಿಸುವುದಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಪೀಠವು ಬಸಂತ್‌ಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT