ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣ ವರ್ಗಾವಣೆ ಪ್ರಕರಣ: ಜೈಲಿನಲ್ಲಿದ್ದ ಮುಖ್ತಾರ್‌ ಅನ್ಸಾರಿ ಬಂಧಿಸಿದ ಇ.ಡಿ

Last Updated 14 ಡಿಸೆಂಬರ್ 2022, 11:14 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾಜಿ ಶಾಸಕ ಮುಖ್ತಾರ್‌ ಅನ್ಸಾರಿಯನ್ನುಬುಧವಾರ ಪ್ರಯಾಗ್‌ರಾಜ್ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಜಾರಿ ನಿರ್ದೇಶನಾಲಯ ಬಂಧಿಸಿದೆ.

5 ಬಾರಿ ಶಾಸಕನಾಗಿದ್ದ ಅನ್ಸಾರಿಯನ್ನು ಹಣ ವಂಚನೆ ಪ್ರಕರಣದಲ್ಲಿ ‌ಕೆಲವು ವರ್ಷಗಳ ಹಿಂದೆ ಬಂಧಿಸಿ ಉತ್ತರ ಪ್ರದೇಶದ ಬಂದಾ ಜೈಲಿನಲ್ಲಿ ಇರಿಸಲಾಗಿತ್ತು. ಅನ್ಸಾರಿ ಮೇಲೆ ಕೊಲೆ, ಭೂ ಕಬಳಿಕೆ ಸೇರಿದಂತೆ ಕನಿಷ್ಠ 49 ಅಪರಾಧ ಪ್ರಕರಣಗಳನ್ನು ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದಾರೆ.

ಈಗಾಗಲೇ ಅನ್ಸಾರಿಗೆ ಸೇರಿದ ₹1.48 ಕೋಟಿ ಮೌಲ್ಯದ ಸ್ಥಿರ ಆಸ್ತಿಯನ್ನು ತನಿಖಾ ಸಂಸ್ಥೆ ಮುಟ್ಟುಗೋಲು ಹಾಕಿಕೊಂಡಿದೆ. ಜೊತೆಗೆ ಘಾಜಿಪುರ್‌ ಜಿಲ್ಲಾಡಳಿತವು ಅಕ್ರಮ ಗಳಿಕೆಯಲ್ಲಿ ‌‌‌‌ಖರೀದಿಸಿದ ₹6 ಕೋಟಿ ಬೆಲೆಬಾಳುವ 2 ನಿವೇಶನಗಳನ್ನು ವಶಕ್ಕೆ ಪಡೆದಿದ್ದು, ಪೊಲೀಸರು ಕೂಡ ಜುಲೈನಲ್ಲಿ ₹ 14.90 ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT