ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಆರ್‌ಎಸ್‌ ಸಂಸದನ ₹96 ಕೋಟಿ ಆಸ್ತಿ ಜಪ್ತಿ

Last Updated 2 ಜುಲೈ 2022, 21:32 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಡಿ ಟಿಆರ್‌ಎಸ್‌ ಸಂಸದ ನಾಮ ನಾಗೇಶ್ವರರಾವ್‌ ಒಡೆತನದ ಮಧುಕಾನ್‌ ಪ್ರಾಜೆಕ್ಟ್ಸ್‌ ಲಿಮಿಟೆಡ್‌ಗೆ ಸೇರಿದ ₹96.21 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇ ಶನಾಲಯ ಮುಟ್ಟುಗೋಲು ಹಾಕಿದೆ.

‘ಮಧುಕಾನ್‌ ಸಮೂಹಕ್ಕೆ ಸೇರಿದ ರಾಂಚಿ ಎಕ್ಸ್‌ಪ್ರೆಸ್‌ವೇ ಲಿಮಿಟೆಡ್‌, ರಾಂಚಿ–ರಾರ್‌ಗಾಂವ್–ಜೆಮ್‌ಶೆಡ್‌ಪುರ ವಿಭಾಗದಲ್ಲಿ 163.50 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಟೆಂಡರ್‌ ಪಡೆದಿತ್ತು. ಇದಕ್ಕಾಗಿ ಬ್ಯಾಂಕ್‌ಗಳಿಂದ ಪಡೆದ ₹1,030 ಕೋಟಿ ಸಾಲದ ಮೊತ್ತವನ್ನು ತನ್ನ ಅಂಗ ಸಂಸ್ಥೆಗಳಿಗೆ ವರ್ಗಾಯಿಸಿತ್ತು’ ಎಂದು ಇ.ಡಿ ಹೇಳಿದೆ.

‘ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ವಿವಿಧೆಡೆ ಕಂಪನಿ ಹೊಂದಿದ್ದ ₹88.85 ಕೋಟಿ ಮೌಲ್ಯದ ಸ್ಥಿರಾಸ್ತಿ ಮತ್ತು ₹7.36 ಕೋಟಿ ಮೌಲ್ಯದ ಚರಾಸ್ಥಿ ಮುಟ್ಟುಗೋಲು ಹಾಕಲಾಗಿದೆ’ ಎಂದೂ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT