ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಜನರ ನೀರಿನ ಸಮಸ್ಯೆ ಪರಿಹಾರಕ್ಕೆ ₹ 2,000 ಕೋಟಿ ಘೋಷಿಸಿದ ಏಕನಾಥ ಶಿಂದೆ

ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ನೀರಿನ ಸಮಸ್ಯೆ ನಿವಾರಣೆ
Last Updated 1 ಡಿಸೆಂಬರ್ 2022, 19:15 IST
ಅಕ್ಷರ ಗಾತ್ರ

ಮುಂಬೈ: ಗಡಿ ಭಾಗದ ನೀರಿನ ಸಮಸ್ಯೆ ಯನ್ನು ಪರಿಹರಿಸಲು ಮಹಿಷಾಳ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾ ಗುವುದು. ಈ ಉದ್ದೇಶಕ್ಕಾಗಿ ಜನವರಿ ಯಲ್ಲಿ ₹ 2000 ಕೋಟಿ ಮೊತ್ತದ ಟೆಂಡರ್ ನೀಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಏಕನಾಥ ಶಿಂದೆ ಘೋಷಿಸಿದ್ದಾರೆ.

ಮುಂಬೈನಲ್ಲಿ ಗುರುವಾರ ನಡೆದ ಬಾಳಾಸಾಹೇಬ್ ಠಾಕ್ರೆ ವೈದ್ಯಕೀಯ ನೆರವು ಘಟಕದ 5ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿ ದರು.

‘ಜತ್ತ ತಾಲ್ಲೂಕು ಜನರು ಮಧ್ಯರಾತ್ರಿ ಅರ್ಧ ಗಂಟೆಯ ಹೊತ್ತಿಗೆ ನನ್ನನ್ನು ಭೇಟಿಯಾಗಲು ಬಂದರು. ಅವರಿಗಾಗಿ ಮಹಿಷಾಳ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರವಾಗಿ ನಾವು ನಿರ್ಧರಿಸಿದ್ದೇವೆ. ಮಹಿಷಾಳ ಕಾಲುವೆ ಮೂಲಕ ಏಳೆಂಟು ಕೆರೆಗಳನ್ನು ಹೇಗೆ ತುಂಬಿಸಬಹುದು ಎಂಬುದನ್ನೂ ನಿರ್ಧರಿಸುತ್ತಿದ್ದೇವೆ. ಆದ್ದರಿಂದ ಅವರಿಗೆ ತಕ್ಷಣವೇ ಸಹಾಯ ಮಾಡಬಹುದು’ ಎಂದರು. ‘ಮಹಾರಾಷ್ಟ್ರದಿಂದ ನಮಗೆ ಸೇವೆ ಸಿಗದೆ, ವಂಚಿತರಾಗಿದ್ದೇವೆ ಎಂಬ ಕಾರಣಕ್ಕೆ ಒಂದೇ ಒಂದು ಹಳ್ಳಿ, ಒಬ್ಬ ವ್ಯಕ್ತಿಯೂ ಬೇರೆಡೆಗೆ ಹೋಗಬಾರದು. ಇದು ರಾಜ್ಯ ಸರ್ಕಾರದ ಜವಾಬ್ದಾರಿ. ಗಡಿಭಾಗದ ಸಂಬಂಧಪಟ್ಟವರಿಗೆ ಅವರ ಬೇಡಿಕೆಯಂತೆ ಆ ಪ್ರದೇಶದಲ್ಲಿ ಕೆಲಸ ಹೇಗೆ ಸಿಗುತ್ತದೆ ಎಂಬುದನ್ನು ಪರಿಶೀಲಿಸುವಂತೆ ಶಂಭುರಾಜ್ ದೇಸಾಯಿ, ಚಂದ್ರಕಾಂತ್ ಪಾಟೀಲ, ದೀಪಕ್ ಕೇಸರಕರ್, ಉದಯ್ ಸಾಮಂತ್ ಅವರಿಗೆ ಸೂಚಿಸಿದ್ದೇನೆ. ಕೂಡಲೇ ಉದಯ್ ಸಾಮಂತ್ ಆ ಭಾಗಕ್ಕೆ ಹೋಗುತ್ತಾರೆ’ ಎಂದಿದ್ದಾರೆ.

ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದ ಮತ್ತೊಮ್ಮೆ ಬಿಸಿಯೇರಿದೆ. ಜತ್ತ ಹಾಗೂ ಅಕ್ಕಲಕೋಟ ತಾಲ್ಲೂಕನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಹೋರಾಟ ಮಾಡಿದ್ದರು. ಅಲ್ಲಿನ ಜನರಿಗೆ ಕುಡಿ ಯುವ ನೀರಿನ ಸಮಸ್ಯೆಯ ಬಗ್ಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೇಳಿಕೆ ನೀಡಿದ್ದರು. ಎಚ್ಚೆತ್ತುಕೊಂಡ ಶಿಂದೆ ಬೇಡಿಕೆಗೆ ತುರ್ತಾಗಿ ಸ್ಪಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT