ಗುರುವಾರ , ಡಿಸೆಂಬರ್ 1, 2022
25 °C
ಮುಖ್ಯಮಂತ್ರಿ ಖುರ್ಚಿಯಲ್ಲಿ ಕುಳಿತರೇ ಸಿಎಂ ಏಕನಾಥ್ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ–

ಸಿಎಂ ಖುರ್ಚಿಯಲ್ಲಿ ಕುಳಿತರೇ ಏಕನಾಥ್ ಶಿಂಧೆ ಪುತ್ರ: ವೈರಲ್ ಫೋಟೊದ ಅಸಲಿಯತ್ತೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಠಾಣೆ: 'ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ಪುತ್ರ ಹಾಗೂ ಶಿವಸೇನಾದ ಸಂಸದ ಶ್ರೀಕಾಂತ್ ಶಿಂದೆ ಅವರು ಸಿಎಂ ಖುರ್ಚಿಯಲ್ಲಿ ಕುಳಿತಿದ್ದಾರೆ. ಅವರು ಸೂಪರ್ ಸಿಎಂ ಆಗಿದ್ದಾರೆ’ ಎಂದು ಟೀಕಿಸುವ ಫೋಟೊ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

‘ಈ ಫೋಟೊವನ್ನೇ ಇಟ್ಟುಕೊಂಡು ವಿರೋಧಿ ಬಣದವರು ಏಕನಾಥ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ. ಏಕನಾಥ್ ಸಿಎಂ ಆದ್ರೆ, ಮಗ ಸೂಪರ್ ಸಿಎಂ’ ಎಂದು ಮೂದಲಿಸುತ್ತಿವೆ.

‘ಇನ್ನು ಎನ್‌ಸಿ‍ಪಿ ಕಾಂಗ್ರೆಸ್ ಇದೇ ಫೋಟೊವನ್ನು ಇಟ್ಟುಕೊಂಡು ಏಕನಾಥ್ ಕೂಡಲೇ ರಾಜೀನಾಮೆ ನೀಡಬೇಕು. ಸಿಎಂ ಖುರ್ಚಿಯ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ’ ಎಂದು ಆರೋಪಿಸಿವೆ.

ಈ ಬಗ್ಗೆ ಇಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಶ್ರೀಕಾಂತ್ ಶಿಂದೆ, ‘ನಾನು ಸಿಎಂ ಅವರ ಯಾವುದೇ ಅಧಿಕೃತ ಖುರ್ಚಿಯಲ್ಲಿ ಕುಳಿತುಕೊಂಡಿಲ್ಲ. ವಿನಾಕಾರಣ ವಿವಾದ ಮಾಡುವುದು ಸರಿಯಲ್ಲ. ನಾನು ಕುಳಿತಿದ್ದು ನಮ್ಮ ತಂದೆಯ ಥಾಣೆಯಲ್ಲಿರುವ ಮನೆಯ ಕಚೇರಿ ಒಳಗೆ. ಅದು ಸಿಎಂ ಅವರ ಅಧಿಕೃತ ನಿವಾಸವೂ ಅಲ್ಲ. ಆ ಕುರ್ಚಿಯ ಹಿಂದೆ ಸಿಎಂ ಅವರ ನಾಮಫಲಕ ಇದ್ದಿದ್ದು ವಿವಾದಕ್ಕೆ ಕಾರಣವಾಗಿದೆ. ನಾನು ಸಿಎಂ ಸ್ಥಾನಕ್ಕೆ ಅಪಾರ ಗೌರವ ನೀಡುತ್ತೇನೆ’ ಎಂದು ಖಾಸಗಿ ಮಾಧ್ಯಮಗಳ ಎದುರು ಶನಿವಾರ ಹೇಳಿಕೊಂಡಿದ್ದಾರೆ.

ಇನ್ನು ಶಿಂದೆ ಬಣದ ಸೇನಾ ನಾಯಕರು ಹಾಗೂ ಬಿಜೆಪಿ ನಾಯಕರು ಶ್ರೀಕಾಂತ್ ಶಿಂದೆ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು