ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ ಕಾರ್ಯಕ್ರಮ: ಮತಗಟ್ಟೆ ಮಾಹಿತಿ ಬಳಕೆಗೆ ಚುನಾವಣಾ ಆಯೋಗ ಸಮ್ಮತಿ

Last Updated 15 ಜನವರಿ 2021, 10:18 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ವಿರುದ್ಧದ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ತಾನು ಹೊಂದಿರುವ ಮತಗಟ್ಟೆ ಮಟ್ಟದ ಮಾಹಿತಿಯನ್ನು ಬಳಸಲು ಚುನಾವಣಾ ಆಯೋಗ ಸಮ್ಮತಿಸಿದೆ.

ಈ ಕಾರ್ಯಕ್ರಮ ಪೂರ್ಣಗೊಂಡ ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಆಯೋಗದಿಂದ ಪಡೆದ ವಿವರಗಳನ್ನು ಅಳಿಸಿ ಹಾಕಬೇಕು ಎಂದೂ ಆಯೋಗ ಹೇಳಿದೆ.

ಆಯಾ ಮತಗಟ್ಟೆ ವ್ಯಾಪ್ತಿಯಲ್ಲಿರುವ 50 ವರ್ಷ ಮೇಲ್ಪಟ್ಟ ವಯೋಮಾನದವರನ್ನು ಗುರುತಿಸಲು ಆಯೋಗದ ಬಳಿ ಇರುವ ಮಾಹಿತಿ ನೀಡುವಂತೆ ಕೋರಿ ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲಾ ಡಿ. 31ರಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಅವರಿಗೆ ಪತ್ರ ಬರೆದಿದ್ದರು ಎಂದು ಮೂಲಗಳು ಹೇಳಿವೆ.

‘ಆಯೋಗದಿಂದ ಪಡೆಯುವ ಮಾಹಿತಿಯನ್ನು ಈಗ ಬಳಕೆಯಲ್ಲಿರುವ ಸೈಬರ್‌ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಕಾಪಾಡಲಾಗುವುದು. ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮಾತ್ರ ಈ ಮಾಹಿತಿಯನ್ನು ಬಳಸಿಕೊಳ್ಳುವುದಾಗಿ ಭಲ್ಲಾ ಅವರು ಆಯೋಗಕ್ಕೆ ಭರವಸೆ ನೀಡಿದ್ದಾರೆ’ ಎಂದು ಇವೇ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT