ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿಯಲ್ಲೇ ಮರಿಗೆ ಜನ್ಮ ನೀಡಿದ ಆನೆ: ಒಂದು ತಾಸು ರಸ್ತೆ ಬ್ಲಾಕ್!

Last Updated 6 ಜುಲೈ 2022, 10:05 IST
ಅಕ್ಷರ ಗಾತ್ರ

ಇಡುಕ್ಕಿ: ತಮಿಳುನಾಡು–ಕೇರಳ ಸಂಪರ್ಕಿಸು ವಾಹನ ದಟ್ಟಣೆಯ ಮಾರಾಯೂರ್ ಹೆದ್ದಾರಿಯಲ್ಲೇ ಆನೆಯೊಂದು ಮರಿಗೆ ಜನ್ಮ ನೀಡಿರುವ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ಮಂಗಳವಾರ ನಸುಕಿನ ಜಾವ ನಡೆದಿದೆ.

ಇದರಿಂದ ಸುಮಾರು ಒಂದು ತಾಸಿಗೂ ಅಧಿಕ ಹೊತ್ತು ಮಾರಾಯೂರ್–ಇಡುಕ್ಕಿ ಹೆದ್ದಾರಿ ಬಂದ್ ಆಗಿತ್ತು.

ತುಂಬು ಗರ್ಭಿಣಿಯಾಗಿದ್ದ ಆನೆ ಹೆರಿಗೆ ಬೇನೆ ತಾಳಲಾರದೇ ರಸ್ತೆಗೆ ಬಂದಿದೆ. ಕಡೆಗೆ ಅಲ್ಲಿಯೇ ಮುದ್ದಾದ ಮರಿಗೆ ಜನ್ಮ ನೀಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಬದಿಯಲ್ಲೂ ನಿಂತಿದ್ದ ವಾಹನ ಸವಾರರು ಗಜಪ್ರಸವಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಳಿಕ ಆನೆ ತನ್ನ ಮರಿಯೊಂದಿಗೆ ಕಾಡಿನೊಳಗೆ ಹೋಗಿದೆ ಎಂದು ಇಡುಕ್ಕಿ ವಲಯ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದ ವಿಡಿಯೊಗಳು ಸ್ಥಳೀಯ ಮಾಧ್ಯಮಗಳಲ್ಲಿ ಬಿತ್ತರಗೊಂಡು ಗಮನ ಸೆಳೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT