ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಂತ್ರಿಕ ದೋಷ: ಗೋ ಫಸ್ಟ್‌ ವಿಮಾನಗಳ ತುರ್ತು ಭೂಸ್ಪರ್ಶ

Last Updated 19 ಜುಲೈ 2022, 15:18 IST
ಅಕ್ಷರ ಗಾತ್ರ

ನವದೆಹಲಿ: ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ‘ಗೋ ಫಸ್ಟ್‌’ ಸಂಸ್ಥೆಯ ಎರಡು ವಿಮಾನಗಳನ್ನು ಮಂಗಳವಾರ ತುರ್ತು ಭೂಸ್ಪರ್ಶ ಮಾಡಲಾಯಿತು.

ಒಂದು ವಿಮಾನವು ಮುಂಬೈನಿಂದ ಲೇಹ್‌ಗೆ ಹಾಗೂ ಮತ್ತೊಂದು ವಿಮಾನವು ಶ್ರೀನಗರದಿಂದ ದೆಹಲಿಗೆ ಹೊರಟಿತ್ತು. ಈ ಎರಡೂ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ, ಲೇಹ್‌ಗೆ ಹೊರಟಿದ್ದ ವಿಮಾನವು ದೆಹಲಿಯಲ್ಲಿ ಮತ್ತು ದೆಹಲಿಗೆ ಹೊರಟಿದ್ದ ವಿಮಾನವು ಮರಳಿ ಶ್ರೀನಗರದಲ್ಲೇ ಭೂಸ್ಪರ್ಶ ಮಾಡಿತು.

ಪ್ರತಿ ಬಾರಿಯೂ ಹಾರಾಟಕ್ಕೆ ಮುನ್ನ ವಿಮಾನವನ್ನು ವಿಮಾನ ನಿರ್ವಹಣಾ ಎಂಜಿನಿಯರ್‌ (ಎಎಂಇ) ತಪಾಸಣೆ ನಡೆಸುತ್ತಾರೆ. ಸೋವವಾರವೂ ಈ ಎರಡೂ ವಿಮಾನಗಳನ್ನು ತಪಾಸಣೆ ಮಾಡಲಾಗಿತ್ತು. ಆದರೆ, ಎಂಜಿನಿಯರ್‌ಗಳ ತಂಡವು ಸರಿಯಾಗಿ ತಪಾಸಣೆ ನಡೆಸದೆ, ಹಾರಾಟಕ್ಕೆ ಅನುಮತಿ ನೀಡಿದೆ’ ಎಂದು ಘಟನೆ ಕುರಿತು ನಡೆಸಿದ ತನಿಖೆಯ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಹೇಳಿದೆ.

ಅರ್ಹ ಎಂಜಿನಿಯರ್‌ಗಳ ತಂಡವನ್ನು ಜುಲೈ 28ರ ಒಳಗೆ ನಿಯೋಜನೆ ಮಾಡಿಕೊಳ್ಳುವಂತೆ ಗೋ ಫಸ್ಟ್‌ ಕಂಪನಿಗೆ ಡಿಜಿಸಿಎ ತಾಕೀತು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT