ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ನೈಲಾನ್‌ ಗಾಳಿಪಟ ದಾರಕ್ಕೆ ನಿಷೇಧ

Last Updated 9 ಮಾರ್ಚ್ 2023, 16:07 IST
ಅಕ್ಷರ ಗಾತ್ರ

ಮುಂಬೈ: ಗಾಳಿಪಟ ಹಾರಿಸಲು ಚೀನಾದ ದಾರ (ಮಾಂಜ) ಎಂದು ಕರೆಯಲ್ಪಡುವ ನೈಲಾನ್‌ ದಾರದ ಬಳಕೆಯನ್ನು ಮಹಾರಾಷ್ಟ್ರ ಸರ್ಕಾರ ನಿಷೇಧಿಸಿದ್ದು, ಇದನ್ನು ಪರಿಸರವಾದಿಗಳು ಸ್ವಾಗತಿಸಿದ್ದಾರೆ.

ಪ್ಲಾಸ್ಟಿಕ್‌ ಅಥವಾ ಸಿಂಥೆಟಿಕ್‌ ವಸ್ತುಗಳಿಂದ ಮಾಡಲಾಗುವ ಚೈನೀಸ್ ಮಾಂಜ, ಚೈನೀಸ್‌ ದೋರ್‌ ಅಥವಾ ನೈಲಾನ್‌ ಅಥವಾ ಸಿಂಥೆಟಿಕ್‌ ಮಾಂಜದಿಂದ ಮನುಷ್ಯರು ಹಾಗೂ ಪಕ್ಷಿಗಳಲ್ಲಿ ಸಾಕಷ್ಟು ಸಾವು–ನೋವುಗಳು ಸಂಭವಿಸಿದೆ. ಅಷ್ಟೇ ಅಲ್ಲದೇ ಇದು ಭೂಮಿಯಲ್ಲಿ ಕರಗುವುದಿಲ್ಲ. ಒಳಚರಂಡಿ, ನದಿಗಳು, ತೊರೆಗಳು, ಜಲಾಶಯಗಳು ಮತ್ತು ಪ್ರಾಣಿಗಳಿಗೆ ಉಸಿರುಗಟ್ಟಿಸುವುದು ಸೇರಿದಂತೆ ಹಲವಾರು ರೀತಿಯಲ್ಲಿ ಪರಿಸರವನ್ನು ಹಾನಿಗೊಳಿಸುತ್ತದೆ ಎಂದು ಪರಿಸರ ಮತ್ತು ಹವಾಮಾನ ಬದಲಾವಣೆ ಇಲಾಖೆ ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಪರಿಸರ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಚೈನೀಸ್ ಮಾಂಜಾ ಅಥವಾ ಚೈನೀಸ್ ಡೋರ್ ಎಂದು ಕರೆಯಲ್ಪಡುವ ದಾರಗಳು, ನುಣ್ಣಗೆ ಪುಡಿಮಾಡಿದ ಗಾಜು, ಲೋಹ ಅಥವಾ ಇತರ ಯಾವುದೇ ಚೂಪಾದ ವಸ್ತುಗಳನ್ನು ಲೇಪಿತ ನೈಲಾನ್, ಸಿಂಥೆಟಿಕ್ ಅಥವಾ ಇತರ ಯಾವುದೇ ದಾರದ ಮಾರಾಟ, ಉತ್ಪಾದನೆ, ಸಂಗ್ರಹಣೆ, ಪೂರೈಕೆ ಮತ್ತು ಬಳಕೆಯನ್ನು ನಿಷೇಧಿಸಿದ್ದು, ಗಾಳಿಪಟ ಹಾರಿಸಲು ಯಾವುದೇ ಚೂಪಾದ ಲೋಹ ಅಥವಾ ಗಾಜು ಅಥವಾ ಅಂಟುಗಳು ಅಥವಾ ದಾರವನ್ನು ಬಲಪಡಿಸುವ ವಸ್ತುಗಳಿಂದ ಮುಕ್ತವಾಗಿರುವ ಹತ್ತಿ ದಾರಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT