ಮಂಗಳವಾರ, ನವೆಂಬರ್ 29, 2022
29 °C

ನನ್ನ ಹೆಂಡತಿ ಸಹ ಗವರ್ನರ್ ಅವರಷ್ಟು ಸಿಟ್ಟು ಮಾಡಿಕೊಂಡಿಲ್ಲ: ಕೇಜ್ರಿವಾಲ್ ವ್ಯಂಗ್ಯ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಲೆಫ್ಟಿನೆಂಟ್‌ ಗವರ್ನರ್‌ (ಎಲ್‌ಜಿ) ವಿ.ಕೆ. ಸೆಕ್ಸೇನಾ ಅವರು ನನ್ನೊಂದಿಗೆ ಸಿಟ್ಟು ಮಾಡಿಕೊಂಡಷ್ಟು, ನನ್ನ ಹೆಂಡತಿಯೂ ಸಿಟ್ಟು ಮಾಡಿಕೊಂಡಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗುರುವಾರ ಕಿಚಾಯಿಸಿದ್ದಾರೆ.

ಸೆಕ್ಸೇನಾ ಅವರು ಸಾಕಷ್ಟು ವಿಚಾರಗಳಲ್ಲಿ ದೆಹಲಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಆಮ್‌ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್‌, ಸೆಕ್ಸೇನಾ ಕುರಿತಂತೆ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

'ಲೆಫ್ಟಿನೆಂಟ್‌ ಗವರ್ನರ್‌ ಸಾಹೇಬರು ಪ್ರತಿದಿನ ನನ್ನ ಮೇಲೆ ಸಿಟ್ಟು ಮಾಡಿಕೊಂಡಷ್ಟು, ನನ್ನ ಹೆಂಡತಿಯೂ ಸಿಟ್ಟು ಮಾಡಿಕೊಂಡಿಲ್ಲ. ಎಲ್‌ಜಿ ಅವರು ಕಳೆದ ಆರು ತಿಂಗಳಲ್ಲಿ ನನಗೆ ಬರೆದಷ್ಟು 'ಪ್ರೇಮ ಪತ್ರ'ಗಳನ್ನು ನನ್ನ ಹೆಂಡತಿ ಬರೆದಿಲ್ಲ. ಎಲ್‌ಜಿ ಸಾಹೇಬರೇ ಚೂರು ಆರಾಮಾಗಿರಿ. ಚೂರು ಆರಾಮಾಗಿ ಇರುವಂತೆ ನಿಮ್ಮ ಸೂಪರ್‌ ಬಾಸ್‌ಗೂ ಹೇಳಿ' ಎಂದು ತಮಾಷೆಯಾಗಿಯೇ ತಿವಿದಿದ್ದಾರೆ.

ಮುಖ್ಯಮಂತ್ರಿಗಳು ಹಾಗೂ ಅವರ ಸಂಪುಟದ ಸಚಿವರು ಮಹಾತ್ಮಾ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದಂದು ರಾಜ್‌ ಘಾಟ್ ಹಾಗೂ ವಿಜಯ ಘಾಟ್‌ನಲ್ಲಿ ನಡೆದ ಕಾರ್ಯಕ್ರಮಗಳಿಗೆ ಹಾಜರಾಗದೆ 'ಸಂಪೂರ್ಣ ಅಸಡ್ಡೆ' ತೋರಿದ್ದಾರೆ ಎಂದು ಆರೋಪಿಸಿ ಸಕ್ಸೇನಾ ಅವರು ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು. ಈ ವಿಚಾರವಾಗಿ ಕೇಜ್ರಿವಾಲ್‌ ಟ್ವೀಟ್‌ ಮಾಡಿ ತಿರುಗೇಟು ನೀಡಿದ್ದಾರೆ.

ಮೂಲಸೌಕರ್ಯ ಯೋಜನೆಗಳು ವಿಳಂಬವಾಗುತ್ತಿವೆ ಎಂದು ಉಲ್ಲೇಖಿಸಿ, ಮರಗಳನ್ನು ಕಡಿಯಲು ತ್ವರಿತವಾಗಿ ಅನುಮತಿ ನೀಡುವಂತೆ ಕಳೆದವಾರ ಸಕ್ಸೇನಾ ಅವರು ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು