ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಗ್ಲಾ ಪ್ರಜೆಗಳಿಗೆ ನಿವಾಸಿ ಪ್ರಮಾಣಪತ್ರ: ಅಂಡಮಾನ್‌ ಮಾಜಿ ಕೌನ್ಸಿಲರ್‌ ಬಂಧನ

Last Updated 27 ಜೂನ್ 2021, 6:56 IST
ಅಕ್ಷರ ಗಾತ್ರ

ಪೋರ್ಟ್‌ಬ್ಲೇರ್: ‘ಸರಿಯಾದ ದಾಖಲೆಗಳಿಲ್ಲದಿದ್ದರೂ ಬಾಂಗ್ಲಾ ಪ್ರಜೆಗಳಿಗೆ ನಿವಾಸಿ ಪ್ರಮಾಣಪತ್ರ ನೀಡಿದ ಆರೋಪದಡಿ ಅಂಡಮಾನ್‌ ನಿಕೋಬಾರ್‌ನ ಮಾಜಿ ಕೌನ್ಸಿಲರ್‌ ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.

‘ಬಾಂಗ್ಲಾದೇಶಿ ಪ್ರಜೆಗಳಾದ ನಯನ್‌ ಸರ್ಕಾರ್‌ ಮತ್ತು ಆತನ ಕುಟುಂಬದ ಸದಸ್ಯರ ವೀಸಾದ ಅವಧಿ ಅಂತ್ಯಗೊಂಡಿದ್ದರಿಂದ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಕ್ರಮವಾಗಿ ವಾಸವಾಗಿದ್ದಾರೆ’ ಎಂದು ಅವರು ಹೇಳಿದರು.

‘ಮಾಜಿ ಕೌನ್ಸಿಲರ್‌ ಸಂಜಯ್‌ ಮೆಶ್ಹಾಕ್‌ ಅವರು, ನಯನ್‌ ಸರ್ಕಾರ್‌, ಅವನ ಸಹೋದರ ಮತ್ತು ಪೋಷಕರಿಗೆ ಸರಿಯಾದ ದಾಖಲೆಗಳಿಲ್ಲದಿದ್ದರೂ ನಿವಾಸಿ ಪ್ರಮಾಣಪತ್ರವನ್ನು ನೀಡಿದ್ದಾರೆ. ಇದು ಮತದಾರರ ಚೀಟಿ (ವೋಟರ್‌ ಐಡಿ) ಸೇರಿದಂತೆ ಇತರ ಭಾರತೀಯ ದಾಖಲೆಗಳು ಪಡೆಯುವಲ್ಲಿ ಅವರಿಗೆ ನೆರವಾಗಿದೆ’ ಎಂದು ಅವರು ಮಾಹಿತಿ ನೀಡಿದರು.

‘ಈ ಪ್ರಕರಣದಡಿ ನಯನ್‌ ಸರ್ಕಾರ್‌ ಮತ್ತು ಸಂಜಯ್‌ನನ್ನು ಬಂಧಿಸಲಾಗಿದೆ. ಈ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ’ ಎಂದು ಅವರು ತಿಳಿಸಿದರು.

ಬಾಂಗ್ಲಾದೇಶಿ ಪ್ರಜೆಗಳು ಅಕ್ರಮವಾಗಿ ದ್ವೀಪದಲ್ಲಿ ವಾಸವಾಗಿರುವವರ ಮಾಹಿತಿ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಅಲ್ಲದೆ ಮಾಹಿತಿದಾರರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT