ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಸದ್‌ ಟಿವಿ’ಯ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ರವಿ ಕಪೂರ್‌ ನೇಮಕ

Last Updated 2 ಮಾರ್ಚ್ 2021, 11:11 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭಾ ಟಿವಿ ಮತ್ತು ರಾಜ್ಯಸಭಾ ಟಿವಿಯನ್ನು ವಿಲೀನಗೊಳಿಸಿ, ‘ಸಂಸದ್‌ ಟಿವಿ’ ಎಂಬ ಹೆಸರಿನಡಿ ಚಾನೆಲ್‌ ತೆರೆಯಲು ಸಂಸತ್ತಿನ ಉಭಯ ಸದನಗಳ ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ. ಈ ಸಂಸದ್‌ ಟಿವಿಯ ಸಿಇಒ ಆಗಿ ನಿವೃತ್ತ ಐಎಎಸ್‌ ಅಧಿಕಾರಿ ರವಿ ಕಪೂರ್‌ ಅವರನ್ನು ಒಂದು ವರ್ಷದ ಅವಧಿಗೆ ನೇಮಕ ಮಾಡಲಾಗಿದೆ.

‘ಮಾರ್ಚ್‌ 1ರಿಂದ ಒಂದು ವರ್ಷದ ತನಕ ರವಿ ಕಪೂರ್‌ ಅವರನ್ನು ಸಂಸದ್‌ ಟಿವಿಯ ಸಿಇಒ ಆಗಿ ನೇಮಕ ಮಾಡಲಾಗಿದೆ’ ಎಂದು ಲೋಕಸಭಾ ಸಚಿವಾಲಯ ಪ್ರಕಟಣೆ ತಿಳಿಸಿದೆ.

‘ಎರಡೂ ಚಾನೆಲ್‌ಗಳನ್ನು ವಿಲೀನ ಮಾಡಿದ್ದರೂ, ಅದು ಎರಡು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಒಂದು ವಿಭಾಗವು ಲೋಕಸಭಾ ಅಧಿವೇಶನಗಳನ್ನು ನೇರ ‍ಪ್ರಸಾರ ಮಾಡಲಿದೆ. ಇನ್ನೊಂದು ರಾಜ್ಯಸಭೆಯ ಅಧಿವೇಶನಗಳನ್ನು ನೇರ ಪ್ರಸಾರ ಮಾಡಲಿದೆ. ಆದರೆ ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನ ಸಂದರ್ಭದಲ್ಲಿ ಎರಡೂ ವಿಭಾಗಗಳು ಒಂದೇ ಮಾದರಿಯ ವಿಷಯವನ್ನು ತೋರಿಸಲಿದೆ. ಆದರೆ ಬೇರೆ–ಬೇರೆ ಭಾಷೆಗಳಲ್ಲಿ(ಹಿಂದಿ–ಇಂಗ್ಲೀಷ್‌) ಅಧಿವೇಶನವನ್ನು ಪ್ರಸಾರ ಮಾಡಲಾಗುತ್ತದೆ’ ಎಂದು ಮೂಲಗಳು ಹೇಳಿವೆ.

ನವೆಂಬರ್‌ 2019ರಲ್ಲಿ ಲೋಕಸಭೆಯ ಸಭಾಪತಿ ಓಂ ಬಿರ್ಲಾ ಮತ್ತು ರಾಜ್ಯಸಭಾ ಸಭಾಪತಿ ವೆಂಕಯ್ಯನಾಯ್ಡು ಅವರು ಈ ನಿರ್ಧಾರ ಕೈಗೊಂಡಿದ್ದರು. ಎರಡು ಚಾನೆಲ್‌ಗಳ ವಿಲೀನ ಪ್ರಕ್ರಿಯೆಗಾಗಿ ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷ ಸೂರ್ಯ ಪ್ರಕಾಶ್‌ ನೇತೃತ್ವದಲ್ಲಿ ಸಮಿತಿಯನ್ನು ಕೂಡ ರಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT