ಸೋಮವಾರ, ಜುಲೈ 4, 2022
24 °C

ಲಖನೌ: ಭಾರಿ ಸ್ಫೋಟಕ, ಐಎಸ್‌ ಬಾವುಟ ವಶ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಲಖನೌ: ಉತ್ತರಪ್ರದೇಶದ ಬಲರಾಮ್‌ಪುರದ ಮುಸ್ತಕೀಮ್‌ ಖಾನ್‌ ನಿವಾಸದಲ್ಲಿ ಭಾರಿ ಸ್ಫೋಟಕ ಮತ್ತು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರ ಸಂಘಟನೆಯ ಬಾವುಟವನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. 

ಎರಡು ಪ್ರೆಷರ್‌ ಕುಕ್ಕರ್‌ಗಳಲ್ಲಿ ಅಳವಡಿಸಿದ್ದ ಸುಧಾರಿತ ಸ್ಫೋಟಕ (ಐಇಡಿ) ಮತ್ತು ಶಸ್ತ್ರಾಸ್ತ್ರ ಸಮೇತ ಆರೋಪಿ ಖಾನ್‌ನನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಗುಂಡಿನ ಚಕಮಕಿ ನಡೆದಿತ್ತು. 

ದೆಹಲಿ ಪೊಲೀಸ್‌ ವಿಶೇಷ ಘಟಕವು ಆರೋಪಿಯನ್ನು ಆತನ ಸ್ವಗ್ರಾಮ ಬಡಿಯಾ ಬೈಶಾಹಿಗೆ ಕರೆದೊಯ್ದು ತಪಾಸಣೆ ನಡೆಸಿತು. ಈ ವೇಳೆ ಏಳು ಭಾರಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಡಿಸಿಪಿ ಪಿ.ಎಸ್‌.ಕುಶ್ವಾಹ ತಿಳಿಸಿದ್ದಾರೆ.  

ಸ್ಫೋಟಕಗಳಿಗೆ ಬಳಸಿದ್ದ 30 ಬಾಲ್‌ ಬೇರಿಂಗ್‌ಗಳನ್ನು‌ ಸಮೀಪದ ಸೈಕಲ್‌ ಅಂಗಡಿಯಲ್ಲಿ ಖರೀದಿಸಲಾಗಿತ್ತು. ಸ್ಫೋಟಕಗಳ ಪರೀಕ್ಷೆಯನ್ನು ಸಮೀಪದ ಸ್ಮಶಾನದಲ್ಲಿ ಆರೋಪಿ ನಡೆಸಿದ್ದನು. ಗ್ರಾಮದ ವಿವಿಧೆಡೆ ತಪಾಸಣೆ ನಡೆಸಲಾಗಿದ್ದು, ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. 

ಆರೋಪಿಯು ಇದೇ 15ರಂದು ದೆಹಲಿಯಲ್ಲಿ ಸ್ಫೋಟ ನಡೆಸಲು ಯೋಜಿಸಿದ್ದ. ಹೆಚ್ಚಿನ ಭದ್ರತೆಯ ಕಾರಣದಿಂದ ಸಂಚನ್ನು ಮುಂದೂಡಿದ್ದ ಎಂದು ಅವರು ವಿವರಿಸಿದ್ದಾರೆ.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು