ಮಂಗಳವಾರ, ಸೆಪ್ಟೆಂಬರ್ 21, 2021
21 °C

ಸಣ್ಣ ಉದ್ದಿಮೆಗಳಿಗೆ ಫೇಸ್‌ಬುಕ್‌ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬೆಂಗಳೂರು ಸೇರಿದಂತೆ ಭಾರತದ ಐದು ನಗರಗಳಲ್ಲಿನ ಮೂರು ಸಾವಿರಕ್ಕೂ ಹೆಚ್ಚಿನ ವಾಣಿಜ್ಯ ಘಟಕಗಳಿಗೆ ಒಟ್ಟು ₹ 32 ಕೋಟಿ ನೆರವು ನೀಡುವುದಾಗಿ ಫೇಸ್‌ಬುಕ್‌ ಮಂಗಳವಾರ ಪ್ರಕಟಿಸಿದೆ. ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ನೆರವಿಗೆ ಬರುವ ಉದ್ದೇಶದಿಂದ ಈ ಘೋಷಣೆಯನ್ನು ಫೇಸ್‌ಬುಕ್‌ ಮಾಡಿದೆ.

‘ಫೇಸ್‌ಬುಕ್‌ನ ಕಚೇರಿ ಇರುವ ದೆಹಲಿ, ಗುರುಗ್ರಾಮ, ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿನ ಸಣ್ಣ ವಾಣಿಜ್ಯ ಘಟಕಗಳಿಗೆ ಈ ನೆರವು ಲಭಿಸಲಿದೆ’ ಎಂದು ಫೇಸ್‌ಬುಕ್‌ ಇಂಡಿಯಾದ ಉಪಾಧ್ಯಕ್ಷ ಅಜಿತ್ ಮೋಹನ್ ಹೇಳಿದ್ದಾರೆ. ನಗದು ಮತ್ತು ಜಾಹೀರಾತು ನೆರವಿನ ರೂಪದಲ್ಲಿ ಇದು 

ಈ ನೆರವನ್ನು ಎಲ್ಲ ಸಣ್ಣ ಉದ್ಯಮಿಗಳಿಗೆ ಮುಕ್ತವಾಗಿ ನೀಡಲಾಗುತ್ತದೆ. ನೆರವನ್ನು ತಮಗೆ ಅಗತ್ಯವಿರುವ ರೀತಿಯಲ್ಲಿ ಬಳಸಿಕೊಳ್ಳಲು ಅವರು ಸ್ವತಂತ್ರರು ಎಂದು ಮೋಹನ್ ತಿಳಿಸಿದ್ದಾರೆ. ‘ನಾವು ನೀಡುವ ನೆರವು ಹಾಗೂ ಸಣ್ಣ ವ್ಯಾಪಾರೋದ್ಯಮಗಳ ಪುನಶ್ಚೇತನಕ್ಕೆ ತೆಗೆದುಕೊಳ್ಳುತ್ತಿರುವ ಇತರ ಕೆಲವು ಕ್ರಮಗಳಿಂದಾಗಿ ಅವರು ಈ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನಮ್ಮದು’ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು