ಗುರುವಾರ , ಡಿಸೆಂಬರ್ 2, 2021
20 °C

DNP- fact check: ವರುಣ್ ಗಾಂಧಿ ಟ್ವಿಟರ್‌ನಲ್ಲಿ ‘ಬಿಜೆಪಿ’ ಮಾಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಿಜೆಪಿ ಸಂಸದ ವರುಣ್ ಗಾಂಧಿ ಅವರು ತಮ್ಮ ಟ್ವಿಟರ್ ‘ಬಯೊ’ದಲ್ಲಿ ‘ಬಿಜೆಪಿ’ ಪದವನ್ನು ತೆಗೆದುಹಾಕಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಡಿದೆ. ಲಖಿಂಪುರ–ಖೇರಿ ಹಿಂಸಾಚಾರದ ಬಳಿಕ ಈ ವಿದ್ಯಮಾನ ಜರುಗಿದೆ ಎನ್ನಲಾಗಿದೆ. ಘಟನೆಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿರುವ ಅವರು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಪಕ್ಷದ ಹೆಸರನ್ನು ತೆಗೆದುಹಾಕಿರುವ ಅವರು ಬಿಜೆಪಿ ತೊರೆಯುವ ಮುನ್ಸೂಚನೆ ಎಂಬ ಅರ್ಥದಲ್ಲಿ ಚರ್ಚೆಯಾಗುತ್ತಿದೆ. 

ವರುಣ್ ಗಾಂಧಿ ಅವರ ಟ್ವಿಟರ್ ಖಾತೆಯ ‘ಬಯೊ’ದಲ್ಲಿ ಬಿಜೆಪಿ ಪದ ಅಳಿಸಿದ್ದಾರೆ ಎಂಬುದು ಸರಿಯಾದ ಮಾಹಿತಿ ಅಲ್ಲ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಅವರು 2014ಕ್ಕಿಂತ ಮೊದಲು ತಮ್ಮ ಬಯೊದಲ್ಲಿ ಬಿಜೆಪಿ ಪದ ಉಲ್ಲೇಖಿಸಿದ್ದರು. ಆ ಬಳಿಕ ಅದರ ಉಲ್ಲೇಖವಿರಲಿಲ್ಲ. 2019ರಲ್ಲಿ ಚುನಾವಣೆಯಲ್ಲಿ ಗೆದ್ದ ಬಳಿಕ ತಮ್ಮ ಕ್ಷೇತ್ರ ‘ಪಿಲಿಭಿತ್’ ಹೆಸರನ್ನು ಸೇರಿಸಿದ್ದನ್ನು ಹೊರತುಪಡಿಸಿದರೆ, ಬೇರೇನನ್ನೂ ಅವರು ಸೇರಿಸಿಲ್ಲ ಅಥವಾ ತೆಗೆದಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.