ಭಾನುವಾರ, ಮೇ 22, 2022
21 °C

ಕುಟುಂಬ ಪಿಂಚಣಿ ₹ 1.25 ಲಕ್ಷಕ್ಕೆ ಏರಿಕೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಿಂಗಳಿಗೆ ₹ 45 ಸಾವಿರ ನಿಗದಿಪಡಿಸಲಾಗಿದ್ದ ಕುಟುಂಬ ಪಿಂಚಣಿಯನ್ನು ₹ 1.25 ಲಕ್ಷಕ್ಕೆ ಏರಿಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಶುಕ್ರವಾರ ತಿಳಿಸಿದ್ದಾರೆ.

ಈ ಪಿಂಚಣಿ ಸುಧಾರಣೆಯು ಮೃತ ನೌಕರರ ಕುಟುಂಬ ಸದಸ್ಯರಿಗೆ ಸಾಕಷ್ಟು ಆರ್ಥಿಕ ಭದ್ರತೆ ನೀಡಲಿದೆ. ಜತೆಗೆ ಅವರ ಜೀವನಮಟ್ಟವನ್ನೂ ಉತ್ತಮಪಡಿಸಲಿದೆ ಎಂದು ಅವರು ಹೇಳಿದ್ದಾರೆ.

ಒಂದು ಮಗು ತನ್ನ ಹೆತ್ತವರ ಮರಣದ ನಂತರ ಎರಡು ಕುಟುಂಬ ಪಿಂಚಣಿ ಪಡೆಯಲು ಅರ್ಹತೆ ಹೊಂದಿದ್ದರೆ ಆ ಮಗು ಪಡೆಯುವ ಮೊತ್ತವನ್ನು ಈಗ ತಿಂಗಳಿಗೆ ₹ 1,25,000ರವರೆಗೆ ಸೀಮಿತಗೊಳಿಸಲಾಗಿದೆ. ಇದು ಈ ಹಿಂದಿನ ಮಿತಿಗಿಂತ ಎರಡೂವರೆ ಪಟ್ಟು ಹೆಚ್ಚು ಎಂದು ಸಿಬ್ಬಂದಿ ಖಾತೆ ರಾಜ್ಯ ಸಚಿವರೂ ಆದ ಸಿಂಗ್ ಹೇಳಿದ್ದಾರೆ.

ಕೇಂದ್ರ ನಾಗರಿಕ ಸೇವೆಗಳ (ಸಿಸಿಎಸ್‌) (ಪಿಂಚಣಿ) ನಿಯಮಗಳು 1972ರ ನಿಯಮ 54ರ ಉಪ-ನಿಯಮ (11)ರ ಪ್ರಕಾರ, ಪತ್ನಿ ಮತ್ತು ಪತಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಅವರ ಮರಣದ ನಂತರ ಮಗು ಎರಡು ಕುಟುಂಬ  ಪಿಂಚಣಿ ಪಡೆಯಲು ಅರ್ಹವಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು