ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇನಲ್ಲಿ 'ಸಂಸತ್‌ ಕಡೆಗೆ ನಡಿಗೆ' ಕರೆ ನೀಡಿದ ರೈತ ಸಂಘಟನೆ

Last Updated 1 ಏಪ್ರಿಲ್ 2021, 4:19 IST
ಅಕ್ಷರ ಗಾತ್ರ

ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು, ಮೇ ತಿಂಗಳಲ್ಲಿ ಸಂಸತ್ತಿಗೆ ಶಾಂತಿಯುತ ಪ್ರತಿಭಟನಾ ಮೆರವಣಿಗೆಗೆಕರೆ ನೀಡಿವೆ.

ಮೇ ತಿಂಗಳ ಮೊದಲ ಹದಿನೈದು ದಿನದೊಳಗೆ ಸಂಸತ್ತಿಗೆ ಮಾರ್ಚ್ ನಡೆಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಘೋಷಿಸಿದೆ.

ರೈತರು ಕಾರ್ಮಿಕರ ಹೊರತಾಗಿ ಮಹಿಳೆಯರು, ದಲಿತ-ಆದಿವಾಸಿ-ಬಹುಜನ, ನಿರೋದ್ಯೋಗಿ ಯುವ ಜನತೆ ಮತ್ತು ಸಮಾಜದ ಪ್ರತಿಯೊಂದು ವರ್ಗದವರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಸಂಸತ್ ಮಾರ್ಚ್ ಸಂಪೂರ್ಣ ಶಾಂತಿಯುತವಾಗಿ ನಡೆಯಲಿದೆ ಎಂದು ಎಸ್‌ಕೆಎಂ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ಜನರು ತಮ್ಮ ಹಳ್ಳಿಗಳಿಂದ ದೆಹಲಿಯ ಗಡಿಗೆ ವಾಹನಗಳಲ್ಲಿ ಬರುತ್ತಾರೆ. ನಂತರ ದೆಹಲಿಯಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ 'ಸಂಸತ್ ಮಾರ್ಚ್'‌ನ ನಿಖರ ದಿನಾಂಕ ಘೋಷಿಸಲಾಗುವುದು ಎಂದು ಹೇಳಿದೆ.

'ಸಂವಿಧಾನ ರಕ್ಷಿಸಿ'...
ಅದೇ ಹೊತ್ತಿಗೆ ಏಪ್ರಿಲ್ 14ರಂದು ಡಾ. ಅಂಬೇಡ್ಕರ್ ಜನ್ಮ ದಿನಾಚರಣೆಯಂದು 'ಸಂವಿಧಾನ್ ಬಚಾವೋ' (ಸಂವಿಧಾನ ರಕ್ಷಿಸಿ) ಅಂದೋಲನಕ್ಕೆ ರೈತ ಸಂಘಟನೆ ಕರೆ ನೀಡಿದೆ. ಇದಕ್ಕೂ ಮೊದಲು ಏಪ್ರಿಲ್ 10ರಂದು ಕೆಎಂಪಿ ಎಕ್ಸ್‌ಪ್ರೆಸ್‌ವೇ ತಡೆಯೊಡ್ಡಲು ನಿರ್ಧರಿಸಲಾಗಿದೆ.

ಕೆಲವು ದಿನಗಳ ಹಿಂದೆಯಷ್ಟೇ ಮಾರ್ಚ್ 26ರಂದು ಸಂಯುಕ್ತ ಕಿಸಾನ್ ಮೋರ್ಚಾ ಭಾರತ್ ಬಂದ್‌ಗೆ ಕರೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT