ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್‌ ಭವನಕ್ಕೆ ನಿತ್ಯ ಮೆರವಣಿಗೆ: ರೈತ ಹೋರಾಟಗಾರರ ಘೋಷಣೆ

Last Updated 18 ಜುಲೈ 2021, 17:27 IST
ಅಕ್ಷರ ಗಾತ್ರ

ನವದೆಹಲಿ: ಮೂರು ಕೃಷಿ ಕಾಯ್ದೆಗಳ ಕುರಿತು ಕೇಂದ್ರ ಸರ್ಕಾರ ಮತ್ತು ಪ್ರತಿಭಟನೆ ನಿರತ ರೈತರ ನಡುವೆ ತಲೆದೋರಿರುವ ಬಿಕ್ಕಟ್ಟು ಸಂಸತ್ ಅಧಿವೇಶದನಲ್ಲಿ ಮತ್ತಷ್ಟು ಚುರುಕು ಪಡೆಯಲಿದೆ. ಗುರುವಾರದಿಂದ ಆಗಸ್ಟ್ 13ರವರೆಗೆ ಪ್ರತಿದಿನವೂ ಸಂಸತ್ ಭವನಕ್ಕೆ ಮೆರವಣಿಗೆ ನಡೆಸಲು ರೈತರ ಮುಖಂಡರು ಮುಂದಾಗಿದ್ದಾರೆ.

ಮೆರವಣಿಗೆ ನಡೆಸಲು ದೆಹಲಿ ಪೊಲೀಸ್ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ನೀಡಿದ್ದ ಪ್ರಸ್ತಾವವನ್ನು ರೈತರ ಸಂಘಟನೆಗಳು ನಿರಾಕರಿಸಿವೆ. ಸಂಸತ್ತನ್ನು ಮುತ್ತಿಗೆ ಹಾಕಲು ಅಥವಾ ಬಲವಂತವಾಗಿ ಕಟ್ಟಡವನ್ನು ಪ್ರವೇಶಿಸುವ ಯಾವುದೇ ಉದ್ದೇಶ ಇಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ.

ಸಂಸತ್ತಿನಲ್ಲಿ ಧರಣಿ:ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ವಿರೋಧ ಪಕ್ಷಗಳ ಸಂಸದರು ಸಂಸತ್ತಿನಲ್ಲಿ ಗುರುವಾರ ಧರಣಿ ನಡೆಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT