ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಪ್ಕಾರ್ ಮೈತ್ರಿಕೂಟಕ್ಕೆ ಅಧ್ಯಕ್ಷರಾಗಿ ಫಾರೂಕ್ ಅಬ್ದುಲ್ಲಾ ಆಯ್ಕೆ

ಉಪಾಧ್ಯಕ್ಷೆಯಾಗಿ ಮೆಹಬೂಬಾ ಮುಫ್ತಿ ಆಯ್ಕೆ
Last Updated 24 ಅಕ್ಟೋಬರ್ 2020, 14:09 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಈಚೆಗೆ ಸ್ಥಾಪನೆಯಾಗಿರುವ ಪೀಪಲ್ಸ್ ಅಲಯೆನ್ಸ್ ಫಾರ್ ಗುಪ್ಕಾರ್‌ ಮೈತ್ರಿಕೂಟದ ಅಧ್ಯಕ್ಷರಾಗಿ ನ್ಯಾಷನಲ್ ಕಾನ್ಫರೆನ್ಸ್‌ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರನ್ನು ಶನಿವಾರ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಉಪಾಧ್ಯಕ್ಷೆಯಾಗಿ, ಸಿಪಿಎಂ ನಾಯಕ ಮೊಹಮ್ಮದ್ ಯೂಸುಫ್ ತರಿಗಾಮಿ ಅವರನ್ನು ಸಂಚಾಲಕರನ್ನಾಗಿ, ಪೀಪಲ್ಸ್ ಕಾನ್ಫರೆನ್ಸ್‌ನ ಸೈಜಾದ್ ಲೋನ್ ಅವರನ್ನು ವಕ್ತಾರರನ್ನಾಗಿ ನೇಮಿಸಲಾಗಿದೆ.

ಮೈತ್ರಿಕೂಟದ ರಚನೆಯಾದ ಬಳಿಕ ಮೊದಲ ಬಾರಿಗೆ ಮೆಹಬೂಬಾ ಮುಫ್ತಿ ಅವರ ಮನೆಯಲ್ಲಿ ಒಂದೆಡೆ ಸೇರಿದ ನಾಯಕರು, ಜಮ್ಮು ಮತ್ತು ಕಾಶ್ಮೀರದ ಧ್ವಜವನ್ನು ಸಾಂಕೇತಿಕ ರೂಪದಲ್ಲಿ ಸ್ವೀಕರಿಸಿದರು.

ಜಮ್ಮುವಿನಲ್ಲಿ ನ. 17ರಂದು ಮುಂದಿನ ಸಭೆ ನಡೆಸುವ ಕುರಿತು ಮೈತ್ರಿಕೂಟದ ಮುಖಂಡರು ತೀರ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT