ಸೋಮವಾರ, ಆಗಸ್ಟ್ 2, 2021
20 °C

ತಮಿಳುನಾಡು: ಆಂಥ್ರಾಕ್ಸ್‌ನಿಂದಾಗಿ ಹೆಣ್ಣು ಆನೆ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಯಮತ್ತೂರು:‘ಇಲ್ಲಿನ ಅನೈಕಟ್ಟಿ ಹೊರವಲಯದಲ್ಲಿರುವ ಅರಣ್ಯ ಪ್ರದೇಶದಲ್ಲಿ ಹೆಣ್ಣು ಆನೆಯ ಕಳೇಬರ ಪತ್ತೆಯಾಗಿತ್ತು. ಈ ಆನೆಯು ಆಂಥ್ರಾಕ್ಸ್‌ನಿಂದಾಗಿ ಮೃತಪಟ್ಟಿದೆ’ ಎಂದು ಅರಣ್ಯ ಇಲಾಖೆಯ ಮೂಲಗಳು ಮಂಗಳವಾರ ತಿಳಿಸಿವೆ.

ಕೊಯಮತ್ತೂರು ಅರಣ್ಯ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ಅಧಿಕಾರಿಗಳು ಸೋಮವಾರ ಗಸ್ತು ತಿರುಗುತ್ತಿದ್ದಾಗ 13 ವರ್ಷದ ಹೆಣ್ಣು ಆನೆಯ ಕಳೇಬರ ಪತ್ತೆಯಾಗಿತ್ತು.

‘ಆನೆಯ ಬಾಯಿ ಮತ್ತು ಗುದದ್ವಾರದಿಂದ ಹೊರಬಂದಿದ್ದ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿತ್ತು. ರಕ್ತದ ಮಾದರಿಯಲ್ಲಿ ಆಂಥ್ರಾಕ್ಸ್‌ ಬ್ಯಾಕ್ಟೀರಿಗಳಿರುವುದು ಪರೀಕ್ಷೆಯಿಂದ ತಿಳಿದುಬಂದಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು