ಭಾನುವಾರ, ನವೆಂಬರ್ 29, 2020
21 °C

ವೈರಲ್ ವಿಡಿಯೊ | ಗುಡಿಸಲಿನಲ್ಲಿ ಚಿರತೆ ಸಂಸಾರ

ಎಎನ್ಐ Updated:

ಅಕ್ಷರ ಗಾತ್ರ : | |

Female leopard gives birth inside hut

ನವದೆಹಲಿ: ನಾಸಿಕ್‌ನ ಇಗತ್‌ಪುರಿ ಪ್ರದೇಶದ ಗುಡಿಸಲಿನೊಳಗೆ ಚಿರತೆಯೊಂದು ಮಂಗಳವಾರ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಚಿರತೆ ಕುಟುಂಬದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ವಿಡಿಯೊ ನೋಡಿದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ಹೆಣ್ಣು ಚಿರತೆಯು ಇಗತ್‌ಪುರಿಯ ಗುಡಿಸಲಿನೊಳಗೆ ನಾಲ್ಕು ಮರಿಗಳಿಗೆ ಜನ್ಮ ನೀಡಿದ್ದು, ಅವೆಲ್ಲವೂ ಸುರಕ್ಷಿತ ಮತ್ತು ಆರೋಗ್ಯಕರವಾಗಿವೆ. ಚಿರತೆ ಮರಿಗಳನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ನಾವೀಗ ಕಾಯುತ್ತಿದ್ದೇವೆ. ಆದರೆ ಮರಿಗಳ ಕಾರಣದಿಂದಾಗಿ ಈಗ ಚಿರತೆಯನ್ನು ಹಿಡಿಯಲು ಸಾಧ್ಯವಿಲ್ಲ' ಎಂದು ಅರಣ್ಯ ಇಲಾಖೆ ಅಧಿಕಾರಿ ಗಣೇಶ್‌‌ ರಾವ್ ಜೋಲ್ ಎಎನ್‌ಐಗೆ ತಿಳಿಸಿದ್ದಾರೆ.

ಇಗತ್‌ಪುರಿ ಪ್ರದೇಶದಲ್ಲಿ ಚಿರತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಅವರು ಮಾಹಿತಿ ನೀಡಿದರು.

ಚಿರತೆ ಕುಟುಂಬದ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ನಾಲ್ಕು ಸಣ್ಣ ಮರಿಗಳು ಗುಡಿಸಲಿನ ಸುತ್ತ ಅಲೆದಾಡುವುದನ್ನು ತೋರಿಸುತ್ತದೆ. ತಾಯಿ ಚಿರತೆ ತನ್ನ ತುಪ್ಪಳವನ್ನು ನಾಲಿಗೆಯಿಂದ ಸವರಿಕೊಳ್ಳುತ್ತಾ ಮೂಲೆಯಲ್ಲಿ ಕುಳಿತಿರುವ ದೃಶ್ಯ ಕಂಡುಬರುತ್ತದೆ. ಬಳಿಕ ಮರಿಗಳು ಮತ್ತೆ ತಮ್ಮ ತಾಯಿಯತ್ತ ತೆರಳುವುದರೊಂದಿಗೆ ವಿಡಿಯೊ ಕೊನೆಗೊಳ್ಳುತ್ತದೆ.

ವಿಡಿಯೊ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ ವಿಡಿಯೊವನ್ನು 153.7 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದು, 16.9 ಸಾವಿರ ಜನರು ಲೈಕ್ ಮಾಡಿದ್ದಾರೆ. 2.6 ಸಾವಿರ ಜನರು ವಿಡಿಯೊ ರೀಟ್ವೀಟ್ ಮಾಡಿಕೊಂಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು