ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್ ಶಾ ಬಗ್ಗೆ ಟ್ವೀಟ್: ನಿರ್ದೇಶಕ ಅವಿನಾಶ್ ದಾಸ್ ಬಂಧಿಸಿದ ಗುಜರಾತ ಪೊಲೀಸರು

Last Updated 16 ಮೇ 2022, 15:40 IST
ಅಕ್ಷರ ಗಾತ್ರ

ಅಹಮದಾಬಾದ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಫೋಟೊ ಪ್ರಕಟಿಸಿದ್ದಕ್ಕೆ ಬಾಲಿವುಡ್ ನಿರ್ದೇಶಕ ಅವಿನಾಶ್ ದಾಸ್ ಅವರನ್ನು ಗುಜರಾತ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅವಿನಾಶ್ ದಾಸ್ ಅವರು ಮೇ 8 ರಂದು ಟ್ವಿಟರ್‌ನಲ್ಲಿ ಅಮಿತ್ ಶಾ ಅವರು ಜಾರ್ಖಂಡ್ ಕೇಡರ್ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ಅವರ ಜೊತೆ ಇರುವ ಫೋಟೊವನ್ನು ಹಂಚಿಕೊಂಡಿದ್ದರು ಎಂದು ಆರೋಪಿಸಲಾಗಿದೆ.

ಪೂಜಾ ಸಿಂಘಾಲ್ ಅವರನ್ನು ಇತ್ತೀಚೆಗೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿತ್ತು. ಪೂಜಾ ಸಿಂಘಾಲ್ ಹಾಗೂ ಅಮಿತ್ ಶಾ ಅವರು ವೇದಿಕೆಯೊಂದರಲ್ಲಿ ಇರುವ ಫೋಟೊವನ್ನು ದಾಸ್ ಹಂಚಿಕೊಂಡಿದ್ದರು. ಇದು ಐದು ವರ್ಷದ ಹಳೆಯ ಫೋಟೊ. ಅಕ್ರಮ ಹಣ ವರ್ಗಾವಣೆಯಲ್ಲಿ ಬಂಧನಕ್ಕೆ ಒಳಗಾಗಿರುವ ಅಧಿಕಾರಿಣಿಯ ಜೊತೆ ಇರುವ ಫೋಟೊವನ್ನು ಈಗ ಹಂಚಿಕೊಂಡು ಜನತೆಯ ದಾರಿ ತಪ್ಪಿಸಿದ್ದಾರೆ ಎಂದುಅಹಮದಾಬಾದ್ ಪೊಲೀಸ್ ಅಧಿಕಾರಿ ಎಚ್‌.ಎಂ ವ್ಯಾಸ್ ಹೇಳಿದ್ದಾರೆ.

ಅಲ್ಲದೇ ಮಾರ್ಚ್ 17 ರಂದು ದಾಸ್ ಅವರು ಫೇಸ್‌ಬುಕ್‌ನಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡುವ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು. ಅದಕ್ಕೂ ಸಹ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಬುಧವಾರ ಇ.ಡಿ ಜಾರ್ಖಂಡ್‌ನ ಗಣಿ ಇಲಾಖೆ ಕಾರ್ಯದರ್ಶಿ ಪೂಜಾ ಅವರ ಮನೆಯಲ್ಲಿ ₹18 ಕೋಟಿ ಹಣವನ್ನು ಜಪ್ತಿ ಮಾಡಿತ್ತು.

ಇನ್ನೂ ಬಾಲಿವುಡ್‌ನಲ್ಲಿ ಅವಿನಾಶ್ ದಾಸ್ ಅವರು ಗುರುತಿಸಿಕೊಂಡಿದ್ದು ಸ್ವರಾ ಭಾಸ್ಕರ್ ಅವರ ಅನಾರ್ಕಲಿ ಆ ರಹಾ ಹಾಗೂ ರಾತ್ ಬಾಕಿ ಹೈ ಎಂಬ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT