ಗುರುವಾರ , ಮೇ 13, 2021
40 °C

ಮಹಾರಾಷ್ಟ್ರ ತಲುಪಿದ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತೀಯ ರೈಲ್ವೆಯ ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲು ಏಳು ಟ್ಯಾಂಕರ್‌ಗಳಲ್ಲಿ ಆಮ್ಲಜನಕ ಹೊತ್ತುಕೊಂಡು ಶುಕ್ರವಾರ ಸಂಜೆ ಮಹಾರಾಷ್ಟ್ರವನ್ನು ತಲುಪಿತು.

ಗುರುವಾರ ತಡರಾತ್ರಿ ವಿಶಾಖಪಟ್ಟಣದಿಂದ ಹೊರಟ  ಆಕ್ಸಿಜನ್‌ ಎಕ್ಸ್‌ಪ್ರೆಸ್‌ ರೈಲು, ಶುಕ್ರವಾರ ಸಂಜೆ  ಮಹಾರಾಷ್ಟ್ರದ ನಾಗಪುರವನ್ನು ತಲುಪಿತು. ಇಲ್ಲಿ ಮೂರು ಟ್ಯಾಂಕರ್‌ ಆಕ್ಸಿಜನ್‌ ಇಳಿಸಲಾಗುವುದು, ಉಳಿದ ನಾಲ್ಕು ಟ್ಯಾಂಕರ್‌ ಅನ್ನು ಮುಂಬೈಗೆ ತರಲಾಗುವುದು ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರೈಲ್ವೆ ಇಲಾಖೆ ದೇಶದ ನಾಗರಿಕರ ಯೋಗಕ್ಷೇಮವನ್ನು ಕಾಪಾಡುವ ನಿಟ್ಟಿನಲ್ಲಿ ಕಷ್ಟದ ಸಂದರ್ಭದಲ್ಲಿ ಎಲ್ಲಾ ಅಗತ್ಯ ಸರಕುಗಳನ್ನು ಸಾಗಿಸುವ ಮೂಲಕ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತಿದೆ ಎಂದು ಗೋಯಲ್‌ ಟ್ವೀಟ್‌ ಮಾಡಿದ್ದರು.

ಆಕ್ಸಿಜನ್‌ ಟ್ಯಾಂಕರ್‌ಗಳನ್ನು ಸಾಗಿಸುವ ಸೌಕರ್ಯಗಳ ವೆಚ್ಚವನ್ನು ಭಾರತೀಯ ಸೇನೆ ಭರಿಸಿದ್ದು, ರೈಲ್ವೆ ಇಲಾಖೆ ನಿರ್ವಹಣೆ ಮಾಡುತ್ತಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು