ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದಲ್ಲಿ ಮತ್ತೇರಿಸುವ ಪದಾರ್ಥ ಸೇವನೆ: ಐವರ ಸಾವು

Last Updated 27 ಜನವರಿ 2022, 13:35 IST
ಅಕ್ಷರ ಗಾತ್ರ

ಪಟ್ನಾ: ಮತ್ತೇರಿಸುವ ಪದಾರ್ಥ ಸೇವಿಸಿ ಐವರು ಮೃತಪಟ್ಟ ಘಟನೆ ಬಿಹಾರದ ಬಕ್ಸಾರ್‌ ಜಿಲ್ಲೆಯ ಅನ್ಸಾರ್ ಗ್ರಾಮದಲ್ಲಿ ನಡೆದಿದೆ.

‘ಗುರುವಾರ ನಸುಕಿನಲ್ಲಿ ಈ ಪದಾರ್ಥವನ್ನು ಸೇವಿಸಿದವರ ಪೈಕಿ ಎಂಟು ಜನರು ಅಸ್ವಸ್ಥಗೊಂಡರು. ಐವರು ಮೃತಪಟ್ಟಿದ್ದು, ಇತರರು ವಾಂತಿಯಿಂದ ಬಳಲುತ್ತಿದ್ದಾರೆ’ ಎಂದು ಜಿಲ್ಲಾಧಿಕಾರಿ ಅಮನ್‌ ಸಮೀರ್‌ ಹೇಳಿದ್ದಾರೆ.

‘ಬಿಳಿ ಬಣ್ಣದ ರಾಸಾಯನಿಕ ಸೇವನೆಯೇ ಸಾವಿಗೆ ಕಾರಣ. ಕೆಲ ಪೆಟ್ಟಿಗೆಗಳಲ್ಲಿದ್ದ ಈ ರಾಸಾಯನಿಕವನ್ನು ಅವರು ಕುಡಿದಿದ್ದಾರೆ. ಹೀಗಾಗಿ ಆ ಪದಾರ್ಥ ಯಾವುದು ಎಂಬುದನ್ನು ಪತ್ತೆ ಹಚ್ಚಲು, ಪೆಟ್ಟಿಗೆಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

‘ಮೃತಪಟ್ಟವರು ಹಾಗೂ ಚಿಕಿತ್ಸೆ ಪಡೆಯುತ್ತಿರುವವರೆಲ್ಲರೂ ಸೇವನೆ ಮಾಡಿದ್ದು ಮದ್ಯ’ ಎಂದು ಗ್ರಾಮಸ್ಥರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT