ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯದಂಗಡಿ ಮೇಲೆ ಗ್ರೆನೆಡ್‌ ದಾಳಿ: ಐವರು ಎಲ್‌ಇಟಿ ಉಗ್ರರ ಬಂಧನ

Last Updated 19 ಮೇ 2022, 13:18 IST
ಅಕ್ಷರ ಗಾತ್ರ

ಶ್ರೀನಗರ: ಉತ್ತರ ಕಾಶ್ಮೀರ ಬಾರಾಮುಲ್ಲ ಜಿಲ್ಲೆಯಲ್ಲಿ ನೂತನ ಮದ್ಯದಂಗಡಿ ಮೇಲೆ ಈಚೆಗೆ ನಡೆದಿದ್ದ ಗ್ರೆನೆಡ್‌ ದಾಳಿಯನ್ನು 48 ಗಂಟೆಗಳ ಅವಧಿಯಲ್ಲಿ ಭೇದಿಸಿರುವ ಜಮ್ಮು–ಕಾಶ್ಮೀರ ಪೊಲೀಸರು, ಈ ಸಂಬಂಧ ಲಷ್ಕರ್‌–ಎ–ತೈಯಬ (ಎಲ್‌ಇಟಿ) ಸಂಘಟನೆಯ ನಾಲ್ವರು ಉಗ್ರರು ಹಾಗೂ ಸಹಚರನೊಬ್ಬನನ್ನು ಬಂಧಿಸಿದ್ದಾರೆ.

‘ಘಟನಾ ಸ್ಥಳದಲ್ಲಿ ದೊರೆತ ಹಲವು ಸಾಕ್ಷ್ಯ ಹಾಗೂ ಸಮೀಪದ ಅಂಗಡಿಗಳ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೆಲ ಶಂಕಿತ ವ್ಯಕ್ತಿಗಳನ್ನು ಸತತ ವಿಚಾರಣೆ ನಡೆಸಿದಾಗ ಬಂಧಿತರು ಎಲ್‌ಇಟಿಯ ‘ಫಾಲ್ಕನ್‌ ಸ್ಕ್ಯಾಡ್‌’ ದಾಳಿಕೋರರು ಎಂಬುದು ಪತ್ತೆಯಾಯಿತು’ ಎಂದು ಬಾರಾಮುಲ್ಲ ಎಸ್‌ಎಸ್‌ಪಿ ರಾಯೀಸ್‌ ಭಟ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಇದೇ ಗುಂಪು ಬಾರಾಮುಲ್ಲ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಹಿಂದೆ ಹಲವು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿತ್ತು’ ಎಂದು ಅವರು ಹೇಳಿದ್ದಾರೆ.

ಮೇ 17ರಂದು ಬಾರಾಮುಲ್ಲದ ದೇವಾನ್‌ ಬಾಗ್‌ನಲ್ಲಿ ನೂತನ ಮದ್ಯದಂಗಡಿ ಮೇಲೆ ಗ್ರೆನೆಡ್‌ ದಾಳಿ ನಡೆಸಿದ್ದರು. ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಗಾಯಗೊಂಡು, ಗಂಭೀರವಾಗಿ ಗಾಯಗೊಂಡಿದ್ದ ನೌಕರರೊಬ್ಬರು ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT